ಮಾ.22ರಂದು ಬೇಡಿಕೆಗಳನ್ನು ಆಗ್ರಹಿಸಿ ನಮ್ಮ ಮೆಟ್ರೋ ನೌಕರ ಮುಷ್ಕರ

ಬಡ್ತಿ, ವೇತನ ಪರಿಷ್ಕರಣೆ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಮ್ಮ ಮೆಟ್ರೋ ನೌಕರರು ಮಾ.22ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ನಿಯಮದ ಪ್ರಕಾರ 14 ದಿನ ಮುಂಚಿತವಾಗಿ ಬಿಎಂಆರ್ ಸಿಎಲ್ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಬೇಡಿಕೆಗಳನ್ನು ಈಡೇರಿಸಲಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಸಂಘ ತಿಳಿಸಿದೆ. ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೆಲಸ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಹೂಡಲು ಬಿಎಂಆರ್ ಸಿಎಲ್ ನೌಕರರ ಸಂಘ ನಿರ್ಧರಿಸಿದೆ. ಕನ್ನಡಿಗ ನೌಕರರಿಗೆ ನೀಡದ ಬಡ್ತಿಯನ್ನು ಹಿಂದಿ ಭಾಷಿಕ ನೌಕರರಿಗೆ ನೀಡಲಾಗಿದೆ. ಇಬ್ಬರ ನಡುವೆ ಅಧಿಕಾರಿಗಳೇ ಒಡಕು ಮೂಡಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ.

ಕಳೆದ ಬಾರಿ ಮೆಟ್ರೋ ನೌಕರರು ಮುಷ್ಕರ ನಡೆಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಮಾ ಜಾರಿ ಮಾಡಲಾಗಿತ್ತು. ಈ ಬಾರಿ ನೌಕರರು ಮುಷ್ಕರ ನಡೆಸುವ ಮುನ್ನವೇ ಎಸ್ಮಾ ಜಾರಿಗೊಳಿಸಲು ಸಾಧ್ಯತೆ ಇದೆ. ಆದರೆ ಇದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಎಸ್ಮಾ ಜಾರಿ ಸಾಧ್ಯವಿಲ್ಲ ಎಂದು ಸಂಘ ತಿಳಿಸಿದೆ.

ಮುಷ್ಕರದ ದಿನ ಸಿಬ್ಬಂದಿಗಳ ನಡೆ :
-ಬೈಯಪ್ಪನಹಳ್ಳಿ ಬಿಎಂಆರ್ ಸಿಎಲ್ ಕಚೇರಿ ಎದುರು ಪ್ರತಿಭಟನೆ
-ಸದಸ್ಯರು ಎಲ್ಲಾ ಕೇಂದ್ರಗಳ ಮುಂದೆ ಗುಂಪುಗೂಡಿ ಘೋಷಣೆಗಳನ್ನು ಕೂಗುತ್ತಾರೆ
-ಸದಸ್ಯರು ಪ್ರತಿಭಟನಾ ಬ್ಯಾಡ್ಜ್ ಗಳನ್ನು ಧರಿಸಿರುತ್ತಾರೆ
-ಸದಸ್ಯರು ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿನಗರದಲ್ಲಿರುವ ಬಿಎಂಆರ್ ಸಿಎಲ್ ಕಾರ್ಪೊರೇಟ್ ಕಚೇರಿ ಮುಂದೆ ಪ್ರದರ್ಶನಗಳನ್ನು ನಡೆಸುತ್ತಾರೆ.

ಮುಷ್ಕರಕ್ಕೆ ಕಾರಣವಾದ ಪ್ರಮುಖ ಬೇಡಿಕೆಗಳು
-ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದು ಮಾಡುವುದು
-ಸಂಘವನ್ನು ಮಾನ್ಯತೆ ಮಾಡುವುದು
-ಬೇಡಿಕೆಗಳ ಪಟ್ಟಿಯನ್ನು ಒಪ್ಪಿಕೊಳ್ಳುವುದು
-ಸಂಘದ ಸದಸ್ಯರಿಗೆ ನೀಡುತ್ತಿರುವ ಕಿರುಕುಗಳವನ್ನು ನಿಲ್ಲಿಸುವುದು
-ಸಂಘದ ಸದಸ್ಯರ ನಿಜವಾದ ಕುಂದುಕೊರತೆಗಳನ್ನು ನಿವಾರಿಸುವುದು
-ಸೇವಾ ನಿಯಮಗಳ ಬದಲಿಗೆ ಸ್ಥಾಯಿ ಸಮಿತಿ ಆದೇಶ ಪಾಲನೆ ಮಾಡುವುದು
-ನಿಯೋಗಿಗಳನ್ನು ಮರಳಿ ಕಳುಹಿಸುವುದು

Related image

Leave a Reply