ಮೆಡಿಕಲ್ ಶುಲ್ಕ ಶೇ.15ರಷ್ಟು ಹೆಚ್ಚಳ

ಖಾಸಗಿ ವೈದ್ಯ-ದಂತ ವೈದ್ಯಕೀಯ ಕಾಲೇಜು ಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿತ್ತು. ಬಳಿಕ ಒಕ್ಕೂಟದ ಪ್ರತಿನಿಧಿಗಳೋಂದಿಗೆ ಈ ಹಿಂದೆ ಎರಡು ಸುತ್ತಿನ ಸಭೆ ನಡೆಸಿದ ಸರ್ಕಾರ ಇದು ಚುನಾವಣಾ ವರ್ಷವಾದ್ದರಿಂದ ಶುಲ್ಕ ಹೆಚ್ಚಳ ಸಾಧ್ಯವಿಲ್ಲವೆಂದು ತಿಳಿಸಿತ್ತು.

ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಭಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ. ಕಾಲೇಜುಗಳು ಶುಲ್ಕ ಹೆಚ್ಚಿಸಲಿದ್ದರೆ ಸರ್ಕಾರದೊಂದಿಗೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲವೆಂದು ಪಟ್ಟು ಹಿಡಿದಾಗ ಅಂತಿಮ ಕ್ಷಣದಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಶೇ.15ರಷ್ಟು ಶುಲ್ಕ ಹೆಚ್ಚಳದಿಂದ ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ 4.40 ಲಕ್ಷ ರೂ ಇರುವ ಸರ್ಕಾರಿ ಕೋಟಾದ ಪಿಜಿ ವೈದ್ಯಕೀಯ ಶುಲ್ಕ 5.06 ಲಕ್ಷ ರೂ ಗೆ ಹೆಚ್ಚಲಿದೆ. 6.60 ಲಕ್ಷ ರೂ ಇರುವ ಆಡಳಿತ ಮಂಡಳಿ ಕೋಟಾದ ವೈದ್ಯ ಸೀಟಿನ ಶುಲ್ಕ 7.59 ಲಕ್ಷ ರೂ ಆಗಲಿದೆ. ಅದೇ ರೀತಿ ಆಡಳಿತ ಮಂಡಳಿಯ ಡೆಂಟಲ್ ಸೀಟು ಶುಲ್ಕ ಪ್ರಸ್ತುತ 3.52 ಲಕ್ಷ ರೂ ಇದ್ದು, ಅದು 4.04ನ ಲಕ್ಷ ರೂಗೆ, ಸರ್ಕಾರಿ ದಂತ ವೈದ್ಯಕೀಯ ಸೀಟು 2.58 ಲಕ್ಷ ರೂ ಗೆ ಏರಲಿದೆ.

Image result for doctors

Leave a Reply