ಭದ್ರತೆ ಹೆಸರಲ್ಲಿ ಪೊಲೀಸರ ದೌರ್ಜನ್ಯ.

ಮಂಡ್ಯ:ಸಿ.ಎಂ. ಗೆ ಭದ್ರತೆ ಕೊಡುವ ಹೆಸರಲ್ಲಿ ಮಾನವೀಯತೆ ಮರೆತ ಪೊಲೀಸ್ ಅಧಿಕಾರಿಗಳು ಮಹಿಳೆ ಎಳೆದು ಮತ್ತು ಗಾಂಧಿವಾದಿ ವೃದ್ದನ ಕತ್ತು ಹಿಡಿದು ತಳ್ಳಿ ದೌರ್ಜನ್ಯ ನಡೆಸಿರುವ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದ ಹಸಿರಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿ.ಎಂ. ವಾಪಸ್ಸಾಗುತ್ತಿದ್ದ ವೇಳೆ ಕಾರಿನ ಬಳಿ ತೆರಳುತ್ತಿದ್ದ ಸಿ.ಎಂ. ರನ್ನು ಮಹಿಳೆಯೋರ್ವಳು ಹತ್ತಿರದಿಂದ ಮಾತನಾಡಿಸಿ ಆಶೀರ್ವದಿಸಲು ತೆರಳುತ್ತಿದ್ದಾಳೆ. ಈ ವೇಳೆಗೆ ಪೊಲೀಸ್ ಅಧಿಕಾರಿ ಭದ್ರತೆ ಹೆಸ್ರಲ್ಲಿ .ಮಹಿಳೆಯ ರೆಟ್ಟೆ ಹಿಡಿದು ಎಳೆದು ದೂರ ತಳಿದ್ರೆ ಗಾಂಧಿವಾದಿ ವೃದ್ದನೋರ್ವ ಸಿ.ಎಂ.ಗೆ ಮನವಿ ಕೊಡಲು ಹೋದಾಗ ಕೆ.ಆರ್.ಎಸ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬ್ಯಾಟರಾಯನಗೌಡ ಆ ವೃದ್ದ ಗಾಂಧಿವಾದಿಯ ಕುತ್ತಿಗೆ ಹಿಡಿದು ಬಹು ದೂರದವರೆಗೆ ತಳ್ಳಿಕೊಂಡು ತೆರಳಿದ್ದಾರೆ.

https://suddisamachaara.com/vid-20180308-wa0006-mp4/

ಪೊಲೀಸರು ಭದ್ರತೆ ಹೆಸ್ರಲ್ಲಿ ಈ ರೀತಿ ಮಹಿಳೆ ಮತ್ತು‌ ವೃದ್ದ ನ ಮೇಲೆ ದೌರ್ಜನ್ಯ ನಡೆಸಿದ್ದು ಎಷ್ಟು‌ ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply