ರಾಮ್ ಗೋಪಾಲ್ ವರ್ಮಾ ರಿಂದ ಮಹಿಳೆಯರ ಬಗ್ಗೆ ಅಚ್ಚರಿಯ ಟ್ವೀಟ್

ಕಳೆದ ವರ್ಷದ ಮಹಿಳಾ ದಿನಾಚರಣೆಯ ದಿನ ವಿವಾದಾತ್ಮಕ ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈ ಭಾರಿ ಅಚ್ಚರಿಯ ಟ್ವೀಟ್ ಮಾಡಿದ್ದಾರೆ.

ಮಹಿಳೆಯರ ಪರವಾಗಿ ಹೇಳಿಕೆ ನೀಡಿರುವ ವರ್ಮಾ ”ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಮಹಿಳಾ ದಿನಾಚರಣೆ ಮಾಡುವುದು ನನ್ನ ಪ್ರಕಾರ ಇದು ಕೂಡ ಒಂದು ರೀತಿ ಅವರಿಗೆ ಮಾಡುವ ಅವಮಾನ. ಯಾಕಂದ್ರೆ ಉಳಿದ 364 ದಿನಗಳು ಪುರುಷರ ದಿನವಾಗಿರುತ್ತೆ. ಪ್ರತಿ ದಿನವೂ ಮಹಿಳಾ ದಿನವೆಂದು ನಾನು ನಂಬುತ್ತೇನೆ. ಯಾಕಂದ್ರೆ ಯಾವ ಪುರುಷನಿಗೂ ಅವನದ್ದೇ ಆದ ದಿನವಿಲ್ಲ. ಪುರುಷರ ದಿನವೆಂದು ಯಾರೂ ಆಚರಿಸಲ್ಲವೇಕೆ.?” ಎಂದು ಟ್ವೀಟ್ ಮಾಡಿದ್ದಾರೆ.

Image result for ramgopal varma

Leave a Reply