ಉಪೇಂದ್ರರನ್ನು ಹಣಿಯಲು ಅಮಿತ್ ಷಾ ಮಾಡಿದ ತಂತ್ರ ಏನು ಗೊತ್ತಾ..??

ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ತನ್ನ ನಟನಾ ಹಾಗೂ ವಿಭಿನ್ನ ರೀತಿಯ ನಿರ್ದೇಶಕದ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಕುಂದಾಪುರದ ಹುಡುಗ.ಇವರು ಕೆಲವು ತಿಂಗಳುಗಳ ಹಿಂದೆ ” ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ” ದ ಮೂಲಕ ರಾಜಕೀಯ ಪ್ರವೇಶಿಸಿ ಯುವಕರನ್ನು ತಲ್ಲಣಿಸುವಂತೆ ಮಾಡಿದ್ದು ನಮಗೆಲ್ಲಾ ತಿಳಿದೇ ಇದೆ. ರಾಜಕೀಯವನ್ನು ಹೋಗಲಾಡಿಸಿ ಪ್ರಜಾಕೀಯವನ್ನು ಕರ್ನಾಟಕದಲ್ಲಿ ಪ್ರತಿಷ್ಠಾಪಿಸುತ್ತೇನೆ ಎಂದು ಹೊರಟವರೀಗ ದಿಗ್ಬ್ರಾಂತರಾಗಿದ್ದಾರೆ..!!
ಹೌದು ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ರಾಜೀನಾಮೆ ಕೊಟ್ಟಿದ್ದಾರೆ,ಈ ಮೂಲಕ ಉಪೇಂದ್ರ ರನ್ನು ರಾಜಕೀಯವಾಗಿ ಆರಾಧಿಸುತ್ತಿದ್ದ ಯುವಕರಿಗೆ ಬರಸಿಡಿಲು ಬಡಿದಂತಾಗಿದೆ.
ನಮಗೆಲ್ಲಾ ತಿಳಿದಿರುವ ಹಾಗೆ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಅಲ್ಲ ಮಹೇಶ್ ಗೌಡ ಎಂಬುವವರು ಪಕ್ಷವನ್ನು ರಿಜಿಸ್ಟರ್ ಮಾಡಿಸಿದ್ದಾರೆ ಇವರೇ ಆ ಪಕ್ಷದ ನಿಜವಾದ ಒಡೆಯ ಎಂದು ಹೇಳಬಹುದು,ಆದರೆ ಇದ್ದಕ್ಕಿದ್ದಂತೆ ಮಹೇಶ್ ಗೌಡ ಹಾಗೂ ಉಪೇಂದ್ರ ರ ನಡುವೆ ವೈಮನಸ್ಸು ಉಂಟಾಗಿ ಕೊನೆಗೆ ಉಪೇಂದ್ರ ಪಕ್ಷ ಬಿಟ್ಟು ಹೊರನಡೆಯುಲ್ಲಿಗೆ ಬಂತು ನಿಂತಿದೆ. ವೈಮಸ್ಸಿಗೆ ಕಾರಣಗಳು ಏನೇ ಇದ್ದರೂ ಉಪೇಂದ್ರ ರನ್ನು ಹಣಿಯುವಲ್ಲಿ ಒಂದು ಮಾಸ್ಟರ್ ಬ್ರೈನ್ ಕೆಲಸ ಮಾಡಿದೆ ಅನ್ನೋದು ಕೆಪಿಜೆಪಿ ಮೂಲಗಳಿಂದ ಬಂದ ಮಾಹಿತಿ.

ಉಪೇಂದ್ರ ರನ್ನು ರಾಜಕೀಯವಾಗಿ ಹಣಿಯಲು ಯತ್ನಿಸುತ್ತಿರುವ ಆ ಮಾಸ್ಟರ್ ಬ್ರೈನ್ ಯಾರು..??

ಅಮಿತ್ ಷಾ ಎಂಬ ರಾಜಕೀಯ ಚಾಣಕ್ಯ ನಾ ಹೆಸರು ಯಾರಿಗೆ ಗೊತ್ತಿಲ್ಲಾ ಹೇಳಿ ಭಾರತದೆಲ್ಲೆಡೆ ಕೇಸರೀ ಪತಾಕೆಯನ್ನು ಹಾರಿಸುತ್ತಿರುವ ಷಾ ನಾ ಮುಂದಿನ ಟಾರ್ಗೆಟ್ ಕರ್ನಾಟಕ..!! ಈಗ್ಯಾಕಪ್ಪಾ ಅಮಿತ್ ಷಾ ಹೆಸರು ಅಂತೀರಾ..?? ಹೌದು ಉಪೇಂದ್ರ ರ ರಾಜಕೀಯ ಜೀವನಕ್ಕೆ ಬೆಂಕಿ ಇಡಲು ಪ್ರಯತ್ನಿಸುತ್ತಿರುವುದು ಮತ್ಯಾರೂ ಅಲ್ಲ ಬಿಜೆಪಿ ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ.

ಏನಿದರ ಹಿನ್ನೆಲೆ..!!

ಕೆಜೆಪಿಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ ಕೆಲವು ದಿನಗಳಿಂದ ಬಿಜೆಪಿ ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾ ಸಂಪರ್ಕದಲ್ಲಿದ್ದಾರೆ,ಹಾಗೂ ಉಪೇಂದ್ರ ರನ್ನು ಕೆಪಿಜೆಪಿ ಯಿಂದ ಹೊರಗಟ್ಟಿರುವುದು ಆಕಸ್ಮಿಕವಾಗಿ ಅಲ್ಲ ಇದೊಂದು ಪೂರ್ವನಿಯೋಜಿತ ಕೆಲಸ ಹಾಗೂ ಇದರ ಹಿಂದೆ ಇರೋ ಮಾಸ್ಟರ್ ಮೈಂಡ್ ಅಮಿತ್ ಷಾ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
ಕೆಪಿಜೆಪಿ ಪಕ್ಷವನ್ನು ಉಪೇಂದ್ರ ಸೇರಿದಾಗಿನಿಂದ ರಾಜಕೀಯ ವಲಯದಲ್ಲಿ ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿತ್ತು ಅಷ್ಟೇ ಅಲ್ಲದೇ ಹೆಚ್ಚಾಗಿ ಯುವಕರೇ ಸ್ವಯಂ ಪ್ರೇರಿತರಾಗಿ ಉಪೇಂದ್ರ ರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿದ್ದರು. ಉಪೇಂದ್ರ ರತ್ತ ಯುವಕರು ಆಕರ್ಷಿತರಾಗುತ್ತಿರುವುದನ್ನು ಕಂಡು ಅತಿ ಹೆಚ್ಚಾಗಿ ಭಯಭೀತರಾಗಿದ್ದು ಅಮಿತ್ ಷಾ, ಕಾರಣ ಹೆಚ್ಚಾಗಿ ಯುವಕರು ಹಾಗೂ ನಗರವಾಸಿಗಳ ಮತಗಳನ್ನು ನೆಚ್ಚಿಕೊಂಡಿದ್ದ ಬಿಜೆಪಿ ಗೆ ಉಪೇಂದ್ರ ರ ಕಾರ್ಯವೈಖರಿ ನಿದ್ದಗೆಡಿಸಿತ್ತು.. ಉಪೇಂದ್ರ ರನ್ನು ಹೇಗಾದರೂ ಮಾಡಿ ಮಟ್ಟಹಾಕಬೇಕೆಂದು ಮಾಸ್ಟರ್ ಪ್ಲಾನ್ ತಯಾರಿಸಿಯೇ ಬಿಟ್ಟರು ಅಮಿತ್ ಷಾ. ಆಗಲೇ ಅಮಿತ್ ಷಾ ರಾ ಕಣ್ಣಿಗೆ ಬಿದ್ದಿದ್ದು ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ, ರಾಜಕೀಯ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್ ಷಾ ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಸ್ಟಾರ್ ಹೋಟೆಲ್ ನಲ್ಲಿ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಮತ್ತು ಈ ವಿಷಯವನ್ನು ಗೌಪ್ಯವಾಗಿಡಲಾಗಿತ್ತು ಆದರೆ ಅಮಿತ್ ಷಾ ಹಾಗೂ ಮಹೇಶ್ ಗೌಡರ ನಡುವೆ ಏನು ಮಾತುಕತೆ ಆಗಿತ್ತು ಎಂಬ ಸತ್ಯ ಈಗ ಹೊರಬಿದ್ದಿದೆ. ಹೌದು ಕೆಪಿಜೆಪಿ ಪಕ್ಷದಿಂದ ಉಪೇಂದ್ರ ರನ್ನು ಮಾರ್ಚ್ ತಿಂಗಳಲ್ಲಿ ಗೇಟ್ ಪಾಸ್ ಕೊಡೋದಕ್ಕೆ ಅಂದೇ ನಿರ್ಧಾರವಾಗಿತ್ತು.

ಅಮಿತ್ ಷಾ ನಾ ಕಣ್ಣಿಗೆ ಉಪೇಂದ್ರ ವಿಲನ್ ಆಗಿ ಕಂಡದ್ದು ಏಕೆ..??

ಬ್ರಾಹ್ಮಣ ಕುಟುಂಬದಿಂದ ಬಂದಿರುವ ಉಪೇಂದ್ರರೆಡೆಗೆ ಯುವಕರು ಮತ್ತು ಬ್ರಾಹ್ಮಣರು ಹೆಚ್ಚಾಗಿ ಆಕರ್ಷಿತರಾಗಿದ್ದರು ಈ ಭಾರಿ ಕರ್ನಾಟಕದಲ್ಲಿ ಉಪೇಂದ್ರ ರನ್ನು ಬೆಂಬಲಿಸಲು ಬ್ರಾಹ್ಮಣ ಸಮುದಾಯ ನಿರ್ಧರಿಸಿತ್ತು ಅಂದಹಾಗೆ ಬ್ರಾಹ್ಮಣರು ಬಿಜೆಪಿ ಯ ಓಟ್ ಬ್ಯಾಂಕ್ ಎಂದು ನಮಗೆಲ್ಲಾ ತಿಳಿದಿರುವ ಸಂಗತಿ, ಉಪೇಂದ್ರ ರೆಡೆಗೆ ಬ್ರಾಹ್ಮಣರು ಹಾಗೂ ಯುವಕರು ಆಕರ್ಷಿತರಾದರೆ ಎಲ್ಲಿ ಮತಗಳು ವಿಭಜನೆಯಾಗಿ ಬಿಜೆಪಿ ಯ ಶಕ್ತಿ ಕುಂದುತ್ತದೊ ಎಂಬ ಭಯ ಅಮಿತ್ ಶಾ ಗೆ ಕಾಡಿತ್ತು ಈ ಕಾರಣದಿಂದಲೇ ಮಹೇಶ್ ಗೌಡ ರೊಡನೆ ಕುತಂತ್ರ ಮಾಡಿ ಕೆಪಿಜೆಪಿಯಿಂದ ಉಪೇಂದ್ರ ರನ್ನು ಹೊರಹಾಕಿಸಿದ್ದು ಎಂಬ ಸಂಗತಿ ಕೆಪಿಜೆಪಿಯ ಮೂಲಗಳಿಂದಲೇ ಬಂದಿದೆ.ಅದೂ ಮಾರ್ಚ್ ತಿಂಗಳಿನಲ್ಲಿಯೇ ಉಪೇಂದ್ರ ರನ್ನು ಹೊರಹಾಕಬೇಕು ಎಂಬುದು ಅಮಿತ್ ಷಾ ನಾ ಅಪೇಕ್ಷೆ ಯಾಗಿತ್ತು ಎಂಬ ಮಾಹಿತಿ ಅದೇ ಮೂಲಗಳಿಂದ ಹೊರಬಿದ್ದಿದೆ..!!

ಮಾರ್ಚ್ ತಿಂಗಳಿನಲ್ಲಿಯೇ ಉಪೇಂದ್ರ ರನ್ನು ಹೊರಹಾಕಬೇಕು ಎಂದು ಅಮಿತ್ ಷಾ ನಿರ್ದೇಶನ ಕೊಟ್ಟಿದ್ದು ಯಾಕೆ..??
ಹೌದು ಇಂತದೊಂದು ಪ್ರಶ್ನೆ ಸಾಮಾನ್ಯ ಜನರಲ್ಲಿ ಕಾಡದೇ ಇರದು ಮಾರ್ಚ್ ನಲ್ಲಿಯೇ ಉಪೇಂದ್ರ ರನ್ನು ಹೊರಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..!!
ಮಾರ್ಚ್ ತಿಂಗಳಿನಿಂದ ಚುನಾವಣೆಗೆ ಕೇವಲ ಎರಡು ತಿಂಗಳ ಕಾಲಾವಕಾಶ ಇರುತ್ತದೆ,ಈ ಸಮಯದಲ್ಲಿ ಉಪೇಂದ್ರ ರನ್ನು ಕೆಪಿಜೆಪಿ ಯಿಂದ ಹೊರ ಹಾಕಿದ್ರೆ ಆತನಿಗೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಲಾವಕಾಶ ಇರುವುದಿಲ್ಲ ಒಂದು ಪಕ್ಷ ಉಪೇಂದ್ರ ಹೊಸ ಪಕ್ಷ ಸ್ಥಾಪನೆ ಮಾಡಲು ಮುಂದಾದರೂ ಕೇವಲ ಎರಡು ತಿಂಗಳಲ್ಲಿ ಪಕ್ಷ ಸ್ಥಾಪಿಸಿ ಪಕ್ಷವನ್ನು ನೋಂದಣಿ ಮಾಡಿಸುವುದು ಅಸಾಧ್ಯ ಇನ್ನೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಸಾಧ್ಯದ ಮಾತು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಉಪೇಂದ್ರ ರನ್ನು ಮುಂದಿನ ವಿಧಾನಸಭಾ ಚುನಾವಣೆಯಿಂದ ದೂರ ಇಡಲು ಅಮಿತ್ ಷಾ ಮಾಡಿರುವ ಮಾಸ್ಟರ್ ಪ್ಲಾನ್ ಇದು ಎಂದು ತಿಳಿದುಬಂದಿದೆ..

ಇದಕ್ಕಾಗಿಯೇ ನೋಡಿ ಅಮಿತ್ ಷಾ ರನ್ನು ಮಾಸ್ಟರ್ ಮೈಂಡ್ ಎನ್ನುವುದು..!!

ಒಟ್ಟಿನಲ್ಲಿ ಉಪೇಂದ್ರ ರನ್ನು ಮೇನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಿಂದ ದೂರವಿಡಲು ಅಮಿತ್ ಷಾ ಮಾಡಿರುವ ಪ್ಲಾನ್ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಬಹುದು..

5 thoughts on “ಉಪೇಂದ್ರರನ್ನು ಹಣಿಯಲು ಅಮಿತ್ ಷಾ ಮಾಡಿದ ತಂತ್ರ ಏನು ಗೊತ್ತಾ..??

 1. ಮಹೇಂದ್ದ says:

  ಅದಕ್ಕೆ ಹೇಳೂದು ಕನ್ನಡಿಗರಿಗೆ ಬುದ್ದಿ ಇಲ್ಲಅಂತ
  ಅಲ್ಲರಿ ಯಲ್ಲಿಂದಲೂ ಬಂದ ಅ ಶಾ ಮಾತನ್ನ ನೀಟಾಗಿ
  ಕೇಳ್ತರೆ. ಅದರೆ ನಮ್ಮವರ ಮಾತಿಗೆ ಒಂದು ನಯ ಪೈಸೆ ಬೆಲೆ ಕೂಡಲ್ಲ.ಅದಕ್ಕ ಅವರು ನಮ್ಮಕನ್ನಡಿಗರನ್ನ ಕಮಂಗಿಗಳನಾಗಿ
  ಮಾಡುತಿದಾರೆ.

 2. NAGARAJU S L says:

  ಇದು ಸತ್ಯವೇ ಆಗಿದ್ದರೆ ಉಪೇಂದ್ರ ರವರ ಅಭಿಪ್ರಾಯ ತಿಳಿಸಿ

 3. Kiran kumar says:

  Firstu upendra sir buddi erabeka enna 6 months agilla already break up nim party ge vote akidre once again TV lli drama start aguthe close ur party don’t confuse karnataka people plzzzz

 4. Uppi sir party iddre ne election fight maadbeka?
  Nota symbol na prachara maadidre,
  Mattu nimm urinalli ivanu istu olleyavanu,
  Avanu istu olleyavanu,
  Vichara maadi vote maadi, illadiddare Nota Burton otti anta Nota campaign maadbnahudu
  Idar bagge swalpa yochisi Uppi sir

 5. Shamin kulal says:

  Yaar ene madidru satya yavattu sayalla evattalla naale gedde gellutte……

Leave a Reply