ಭ್ರಷ್ಟ ಅಧಿಕಾರಿಗಳಿಗೆ ಇವತ್ತು ಬ್ಲ್ಯಾಕ್ ಫ್ರೈಡೆ.

ಕೋಲಾರ :ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಸಣ್ಣ ನೀರಾವರಿ ಇಲಾಖೆ ಆಧಿಕಾರಿ ಆಪ್ಪಿರೆಡ್ಡಿಗೆ ಸೇರಿದ 2 ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ಆಧಿಕಾರಿ ಆಕ್ರಮ ಆಸ್ತಿಗಳಿಕೆ ದೂರು ಹಿನ್ನಲೆ ಆಧಿಕಾರಿಯ ಎರಡು ಮನೆಯ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಜಿಲ್ಲಾ ಪಂಚಾಯತ್ ಇಂಜನಿಯರಿಂಗ್ ಉಪವಿಭಾಗದ ಎಇಇ ವಿಜಯಕುಮಾರ್ ಮನೆ ಕಚೇರಿ ಮೇಲೂ‌ದಾಳಿ ನಡೆದಿದ್ದು ಸುಮಾರು 20 ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ನಡೆದಿದೆ ಹಾಗೆ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜಾಶ್ರೀ ಜೈನಾಪುರೆಗೆ ಸೇರಿದ ಬೆಳಗಾವಿಯ ಕುವೆಂಪು ನಗರ, ವಿಜಯಪುರದ ಮನೆ, ಧಾರವಾಡದಲ್ಲಿರೋ ಪತಿಯ ಮನೆ ಮೇಲೆ ದಾಳಿ ನಡೆಸಿ ಡಿವೈಎಸ್ಪಿ ರಘು ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ತುಮಕೂರಿನ

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮನೆ ಮೇಲೂ ಎಸಿಬಿ ದಾಳಿಯಾಗಿದ್ದು ತಿಪಟೂರಿನ ವಿದ್ಯಾನಗರದಲ್ಲಿರು ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ತಿಪಟೂರು,ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧೆಡೆ ಅಕ್ರಮ ಆಸ್ತಿ ಹೊಂದಿರುವ ಮಾಹಿತಿ ಆಧರಿಸಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಉಡುಪಿಯ ಅಬಕಾರಿ ಉಪಾಧೀಕ್ಷಕ ವಿನೋದ್ ಕುಮಾರ್ ಗೆ ಸೇರಿದ ಮಂಗಳೂರಿನ ಕುಂಟಿಕಾನದಲ್ಲಿರು ಮನೆ ಮೇಲೂ‌ ಎಸಿಬಿ‌ ದಾಳಿ ಮಾಡಿದೆ. ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹಾಗೂ ಚಿನ್ನಾಭರಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಬೆಳಗ್ಗೆ ಸಿಹಿ‌ ನಿದ್ರೆಯಿಂದ ಎದ್ದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಚಳಿ ಬಿಡಿಸಿದೆ.

Leave a Reply