ಸ್ವಚ್ಛತೆಯ ಮಹತ್ವ ಸಾರುವ ಕಾಲಿಂಗ್ ಬೆಲ್ ಗಳು

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಪಂ ವ್ಯಾಪ್ತಿಯ ಪ್ರತೀ ಮನೆಯಲ್ಲಿ ಸ್ವಚ್ಛತೆಯ ಮಹತ್ವ ಸಾರುವ ಗೀತೆಯನ್ನು ಮೊಳಗಿಸುವ ಕಾಲಿಂಗ್ಬೆಲ್ಗಳನ್ನು ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಳ್ಳಿಗೆಯಲ್ಲಿರುವ ಸಚಿವ ಬಿ.ರಮಾನಾಥ ರೈ ಮನೆಯಲ್ಲಿ ಈ ಕಾಲಿಂಗ್ ಬೆಲ್ ಅಳವಡಿಸಿ ಬಳಿಕ ಮೊಳಗಿಸುವ ಮೂಲಕ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ರಾಜ್ಯದಲ್ಲಿಯೇ ಪ್ರಥಮವಾಗಿ ಸ್ವಚ್ಛತಾ ಗೀತೆಯನ್ನು ಮೊಳಗಿಸಿ ಕಾಲಿಂಗ್ ಬೆಲ್ಗಳನ್ನು ಅಳವಡಿಸಿ ಮನೆಗಳಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಈ ಅಭಿಯಾನದ್ದಾಗಿದೆ.

ಈ ಕಾಲಿಂಗ್ ಬೆಲ್ಗಳಿಗೆ ತಲಾ 250 ರೂ. ತಯಾರಿಕಾ ವೆಚ್ಚ ತಗಲಿದ್ದು, ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಅಡ್ಯಾರು ಈ ಎರಡು ಸಂಸ್ಥೆಗಳು ಇದರ ವೆಚ್ಚವನ್ನು ಭರಿಸುವ ಮೂಲಕ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಮನೆ ಮನೆಗೆ ಕಾಲಿಂಗ್ಬೆಲ್ಗಳನ್ನು ಅಳವಡಿಕೆ ಮಾಡುವ ಜವಾಬ್ದಾರಿಯನ್ನು ಕಳ್ಳಿಗೆ ಗ್ರಾಪಂ ವಹಿಸಿಕೊಂಡಿದೆ ಎಂದು ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕಿ ಮಂಜುಳಾ ತಿಳಿಸಿದ್ದಾರೆ.

ಮಂಗಳಾದೇವಿಯ ರಾಮಕೃಷ್ಣ ಮಿಷನ್ ಮತ್ತು ಸಹ್ಯಾದ್ರಿ ಅಡ್ಯಾರು ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಕಳ್ಳಿಗೆ ಗ್ರಾಮದ 1,127 ಮನೆಗಳಿಗೆ ಈ ಕಾಲಿಂಗ್ ಬೆಲ್ ಅಳವಡಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಅಲ್ಲದೆ ಗುರುವಾರ ಉದ್ಘಾಟನೆಗೊಂಡ ನೂತನ ಕಳ್ಳಿಗೆ ಗ್ರಾಪಂ ಕಾರ್ಯಾಲಯದಲ್ಲಿಯೂ ಕಾಲಿಂಗ್ ಬೆಲ್ ಅಳವಡಿಸುವುದರೊಂದಿಗೆ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು.

Image result for swachh bharat

Leave a Reply