ದರ್ಶನ್ ಮನೆ ಅಂಗಳಕ್ಕೆ ಬಂದಿದೆ ಜಿಪ್ಸಿ..

ದರ್ಶನ್ ಹೊಸ ಜಿಪ್ಸಿ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಅಭಿಮಾನಿಗಳು ಈಗಾಗಲೇ ಜಿಪ್ಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಲಂಬೋರ್ಗಿನಿ ಕಾರು ಖರೀದಿ ಮಾಡಿ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲೆಡೆ ಸುತ್ತಾಡಿದ್ದರು. ಚಕ್ರವರ್ತಿ ಕಾರು ನೋಡಲು ದರ್ಶನ್ ಸ್ನೇಹಿತರೆಲ್ಲರೂ ಮನೆಗೆ ಭೇಟಿ ನೀಡಿ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದರು.

ದರ್ಶನ್ ಬಳಿ, ಪೋಶೆ, ಜಾಗ್ವಾರ್, ಆಡಿ, ರೇಂಜ್ ರೋವರ್, ಐ 20 ಕಾರ್, ದುಬಾರಿ ಫಾರ್ಚೂನರ್, ಮಿನಿಕೂಪರ್, ಹಮ್ಮರ್ ಕಾರುಗಳಿವೆ. ಸದ್ಯಕ್ಕೆ ದರ್ಶನ್ ಯಜಮಾನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಸೆಟ್ ನಲ್ಲಿ ಜಿಪ್ಸಿ ಕಾಣಿಸಿಕೊಂಡಿದೆ.

ಲಂಬೋರ್ಗಿನಿ ಕಾರಿನ ನಂತರ ನಿರ್ಮಾಪಕ ರಾಮಮೂರ್ತಿ ದರ್ಶನ್ ಅವರಿಗೆ ಮಾರುತಿ 800 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಹೊಸ ಕಾರಿನ ಬಗ್ಗೆ ಜನರು ಅಭಿಮಾನಿಗಳು ಮಾತನಾಡುತ್ತಿರುವಾಗಲೇ ದರ್ಶನ್ ಮನೆ ಅಂಗಳಕ್ಕೆ ಜಿಪ್ಸಿ ಬಂದಿದೆ.

ಜಿಪ್ಸಿ ಕೊಂಡುಕೊಂಡರಾ ಚಕ್ರವರ್ತಿ

Leave a Reply