ಭಾರತಕ್ಕೆ ನಾಲ್ಕು ದಿನದ ಪ್ರವಾಸಕ್ಕಾಗಿ ಫ್ರೆಂಚ್ ಅಧ್ಯಕ್ಷ ಎಮಾನ್ಯುಲ್ ಮಾಕ್ರೋನ್

ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ ಮೇರೆಗೆ ಭಾರತಕ್ಕೆ ನಾಲ್ಕು ದಿನದ ಪ್ರವಾಸಕ್ಕಾಗಿ ಫ್ರೆಂಚ್ ಅಧ್ಯಕ್ಷ ಎಮಾನ್ಯುಲ್ ಮಾಕ್ರೋನ್ ಇಂದು ಆಗಮಿಸಲಿದ್ದಾರೆ. ಮಾಕ್ರೋನ್ ರವರೊಂದಿಗೆ ಅವರ ಪತ್ನಿ ಮತ್ತ ಫ್ರೆಂಚ್ ಸಚಿವಾಲಯದ ಸಚಿವರೊಬ್ಬರು ಆಗಮಿಸಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ನಡುವೆ ಆರ್ಥಿಕ, ರಾಜಕೀಯ ಸಂಬಂಧದ ಕುರಿತು ಉಭಯ ನಾಯಕರೂ ಚರ್ಚೆ ನಡೆಸಲಿದ್ದಾರೆ.

ಉಭಯ ದೇಶಗಳೂ ಭದ್ರತೆ, ನೌಕಾಶಕ್ತಿ, ಬಾಹ್ಯಾಕಾಶ, ಸೇನೆ ಮುಂತಾದ ವಿಷಯಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಾ.11 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸೋಲಾರ್ ಅಲಿಯನ್ಸ್ (ಐಎಸ್ ಎ) ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ. ನಂತರ ಮಾ.12 ರಂದು ಫ್ರೆಂಚ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ವಾರಣಾಸಿಗೆ ಪ್ರವಾಸ ಮಾಡಲಿದ್ದಾರೆ.

Related image

Leave a Reply