ಸಿ.ಎಂ. ಗೆ ಒಕ್ಕಲಿಗರೇ ಟಾರ್ಗೆಟ್ : ಹೆಚ್ ಡಿ ಕೆ

ಮೈಸೂರು :ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣದಲ್ಲಿ ಕರ್ತವ್ಯ ಲೋಪದಡಿ ಯೋಗೇಶ್ ಎಂಬ ಪೊಲೀಸ್ ಅಧಿಕಾರಿಯನ್ನ ರಾಜ್ಯ ಸರ್ಕಾರ ಸಸ್ಪೆಂಡ್ ಮಾಡಿರೋ ಕ್ರಮಕ್ಕೆ hdk ಕಿಡಿ ಕಾರಿದ್ದಾರೆ. ಸರ್ಕಾರ ತನ್ಮ ವೈಪಲ್ಯವನ್ನು ಮುಚ್ಚಿಕೊಳ್ಳಲು‌ ಈ ರೀತಿ ಓರ್ವ ಒಕ್ಕಲಿಗ ಸಮುದಾಯದ ಸಣ್ಣ ಅಧಿಕಾರಿಯನ್ನ ಬಲಿಪಶು ಮಾಡಿದೆ ಅಂತಾ ಗಂಭೀರ ಆರೋಪ ಮಾಡಿದ್ರು. ಮೈಸೂರಿನ‌ ವರುಣಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಈ ಸಂಬಂಧ ಮಾತನಾಡಿದ ಕುಮಾರಸ್ವಾಮಿ ಯೋಗೇಶ್ ರವರನ್ನು‌ ಯಾವ ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ದೀರಿ‌ ಅಂತಾ ಸಿ.ಎಂ. ಸಿದ್ರಾಮಯ್ಯಗೆ ತರಾಟಗೆ ತೆಗೆದುಕೊಂಡ್ರು.ಅಲ್ದೆ ಲೋಕಾಯುಕ್ತ ಕಚೇರಿಗೆ ಭದ್ರತೆ ಒದಗಿಸಬೇಕಾದುದ್ದು ಆ ವಲಯದ ಡಿಸಿಪಿ ಗೆ ಸಂಬಂಧಪಟ್ಟ ಕರ್ತವ್ಯ. ಅವರನ್ನು ಬಿಟ್ಟು ಸಣ್ಣ ಸಮುದಾಯದ ಸಣ್ಣ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದ್ದು‌ ಎಷ್ಟು ಸರಿ‌ ಅಂತಾ ಪ್ರಶ್ನೆ‌ ಮಾಡಿದ್ದಾರೆ.

Leave a Reply