ರಜನಿ ಜೊತೆಗೆ ಸ್ಕ್ರೀನ್ ಹಂಚಿಕೊಂಡಿರುವ ನಾಯಿಗೆ ಬಾರಿ ಡಿಮ್ಯಾಂಡ್

ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಅದ್ಯಾವಾಗ ತೆರಕಾಣುತ್ತೋ ಅಂತ ಅಭಿಮಾನಿಗಳು ಕಾಯುವಂತಾಗಿದೆ. ಚಿತ್ರದ ಪೋಸ್ಟರ್ ನೋಡಿದ್ಮೇಲಂತೂ ರಜನಿ ಫ್ಯಾನ್ಸ್ ಸಿನೆಮಾ ನೋಡಲು ತುದಿಗಾಲಲ್ಲಿದ್ದಾರೆ. ಕಾಲಾ ಸಿನೆಮಾದ ಪೋಸ್ಟರ್ ನಲ್ಲಿರೋ ನಾಯಿಯನ್ನು ನೀವು ಕೂಡ ಗಮನಿಸಿರಬೇಕು. ಕಾಲಾ ಚಿತ್ರದಲ್ಲಿ ಅಭಿನಯಿಸುವಾಗ ಮಣಿ, ತಲೈವಾಗೆ ಗುಡ್ ಫ್ರೆಂಡ್ ಆಗಿತ್ತಂತೆ. ರಜನಿ ಪ್ರತಿ ನಿತ್ಯ ಅದಕ್ಕೆ ಒಂದು ಪ್ಯಾಕೆಟ್ ಬಿಸ್ಕೆಟ್ ಕೊಡೋದನ್ನು ಮರೆಯುತ್ತಿರಲಿಲ್ಲ. ರಜನಿ ಜೊತೆ ಸ್ಕ್ರೀನ್ ಮೇಲೆ ಮಿಂಚಿರೋ ಶ್ವಾನವೀಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಇದು ಅಂತಿಂಥಾ ನಾಯಿಯಲ್ಲ, ಇದರ ಬೆಲೆ ಈಗ 2 ಕೋಟಿ ರೂಪಾಯಿಗೂ ಅಧಿಕ. ಮಣಿ ಎಂಬ ಈ ಶ್ವಾನ ರಜನಿಕಾಂತ್ ಜೊತೆ ನಟಿಸಿರೋದ್ರಿಂದ ಅದಕ್ಕೆ ಫುಲ್ ಡಿಮ್ಯಾಂಡ್ ಬಂದಿದೆ. ಮಲೇಷಿಯಾದ ಕೆಲವರು 2 ಕೋಟಿ ಕೊಟ್ಟು ಈ ನಾಯಿಯನ್ನು ಖರೀದಿ ಮಾಡಲು ಮುಂದೆ ಬಂದಿದ್ದಾರಂತೆ.

ಪ್ರಾಣಿ ತರಬೇತುದಾರ ಸಿಮೊನ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಆದ್ರೆ 2 ಕೋಟಿ ಕೊಡ್ತೀನಿ ಅಂದ್ರೂ ಅವರು ನಾಯಿಯನ್ನು ಕೊಡಲು ಒಪ್ಪಿಲ್ಲ. ಯಾಕಂದ್ರೆ ಚಿಕ್ಕ ಮರಿಯಿದ್ದಾಗಿನಿಂದ್ಲೂ ಪ್ರೀತಿಯಿಂದ ಸಾಕಿದ ನಾಯಿಯನ್ನು ಈಗ ಕೊಡಲು ಇಷ್ಟವಿಲ್ಲ ಎನ್ನುತ್ತಾರೆ ಸಿಮೊನ್.

Leave a Reply