ಸಿನೆಮಾವಾಗಲಿದ್ಯಾ ಕೊಹ್ಲಿ – ಅನುಷ್ಕಾ ಜೀವನ ಕಥೆ

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸೆಲೆಬ್ರೆಟಿ ಜೋಡಿ ಯಾರೆಂದು ಕೇಳಿದರೆ ಯಾರಾದರು ಹೇಳುತ್ತಾರೆ ಅದುವೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಂತ. ಈ ಜೋಡಿ ವರ್ಷದ ಅತ್ಯುತ್ತಮ ಜೋಡಿಯಾಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.

ಪ್ರಸ್ತುತ ಈ ಜೋಡಿಯ ಪ್ರೇಮ ಕಥೆ ಆಧರಿಸಿ ಸಿನಿಮಾ ಮಾಡಲು ಬಾಲಿವುಡ್ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ ಆದರೆ ಈ ವಿಷಯ ಸತ್ಯಸಂಗತಿಗೆ ಬಲು ದೂರ ಎನ್ನುವುದು ಬಲ್ಲವರ ಮಾತು. ಏನೇ ಇರಲಿ ಈ ಇಬ್ಬರ ಪ್ರೇಮ ಕಥೆ ತೆರೆಗೆ ಬಂದರೆ ಸಿನಿಲೋಕದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವುದು ಖಾಯಂ ಎನ್ನುತ್ತಿದೆ ಮಾಧ್ಯಮ ಲೋಕ.

ವಿರಾಟ್ ಕೊಹ್ಲಿ ಇತ್ತೀಚೆಗೆ ತನ್ನ Instagram ನಲ್ಲಿ ತಮ್ಮ ರೀಸೆಂಟ್ ಅಪ್ ಡೇಟ್ಸ್ ಹಾಗು ಅನುಷ್ಕಾರೊಂದಿಗಿನ ಪೋಟೋಸ್ ಗಳು ನೋಡುಗರನ್ನು ಬೆರಗುಗೊಳಿಸುತ್ತದೆ. ಹಾಗು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಳ ವಿವಾಹವನ್ನು ಸುತ್ತುವರೆದಿರುವ ಪ್ರೀತಿಪಾತ್ರಗಳು, ಪ್ರವಾಸಗಳು, ಸಮಾರಂಭಗಳು, ಹನಿಮೂನ್ ಟ್ರಿಪ್ ಗಳು ಸೇರಿದಂತೆ ಅನೇಕ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸದ್ದು ಮಾಡುತ್ತಿರುವುದನ್ನು ನಾವೆಲ್ಲ ದಿನನಿತ್ಯ ನೋಡುತ್ತಿದ್ದೇವೆ.

Related image

 

Leave a Reply