ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ ನವದಂಪತಿಗಳು

ಇಂದು ಬೆಳಗ್ಗೆ ನವದಂಪತಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಆಗಮಿಸಿ ಇನ್‍ಸ್ಪೆಕ್ಟರ್ ಮಂಜುನಾಥ್ ಮುಂದೆ ಹೇಳಿಕೆ ನೀಡಿದ್ದಾರೆ. ತಾವು ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪತ್ನಿ ಗೀತಾ ನಾಯ್ಕ್ ಅವರು ಮೊನ್ನೆ ಯಲಹಂಕ ನ್ಯೂಟೌನ್ ಠಾಣೆಗೆ ಆಗಮಿಸಿ ಮಗಳು ಲಕ್ಷ್ಮೀ ನಾಯ್ಕ್ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಮೈಸೂರಿನ ರೆಸಾರ್ಟ್‍ವೊಂದರಲ್ಲಿ ಲಕ್ಷ್ಮಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಅಲ್ಲಿಗೂ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಇವರು ಪತ್ತೆಯಾಗಿರಲಿಲ್ಲ. ನಿನ್ನೆ ಇವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆಂಬ ಸುದ್ದಿ ಕೇಳಿಬಂದಿತ್ತು. ಸುದ್ದಿ ಹರಡುತ್ತಿದಂತೆ ನವದಂಪತಿ ತಾವು ಸ್ವಇಚ್ಛೆಯಿಂದ ಮದುವೆ ಮಾಡಿಕೊಂಡಿರುವುದಾಗಿ ಫೇಸ್‍ಬುಕ್‍ನಲ್ಲಿ ಸೆಲ್ಫಿವೊಂದನ್ನು ಪೋಸ್ಟ್ ಮಾಡಿದ್ದರು. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರಿಂದ ಇಂದು ಬೆಳಗ್ಗೆ ನವದಂಪತಿ ಠಾಣೆಗೆ ಹಾಜರಾಗಿ ಇನ್‍ಸ್ಪೆಕ್ಟರ್ ಮುಂದೆ ತಾವು ಸ್ವಇಚ್ಛೆಯಿಂದ ಮದುವೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿ ತೆರಳಿದರು.

Leave a Reply