‘ನಮೋ’ ಸಿನಿಮಾದ ಪೋಸ್ಟರ್ ಬಿಡುಗಡೆ

ಒಂದು ಕಡೆ ನಟ ಉಪೇಂದ್ರ ಪಕ್ಷದಿಂದ ನಿರ್ದೇಶಕಿ ರೂಪಾ ಅಯ್ಯರ್ ತಮ್ಮ ರಾಜಕೀಯ ಕೆರಿಯರ್ ಶುರು ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ರೂಪಾ ಅಯ್ಯರ್ ತಮ್ಮ ಮತ್ತೊಂದು ಸಿನಿಮಾವನ್ನು ಶುರು ಮಾಡಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈಗ ರೂಪಾ ಅಯ್ಯರ್ ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದು, ‘ನಮೋ ಟ್ರೂ ಇಂಡಿಯನ್’ ಎಂಬ ಹೆಸರಿಡಲಾಗಿದೆ. ಮಹಿಳಾ ದಿನಾಚರಣೆಯ ವಿಶೇಷವಾಗಿ ತಮ್ಮ ಸಿನಿಮಾ ಫಸ್ಟ್ ಲುಕ್ ಅನ್ನು ಅವರು ಬಿಡುಗಡೆ ಮಾಡಿದ್ದಾರೆ. ಮೂರು ಬಣ್ಣದಲ್ಲಿ ಚಿತ್ರದ ಪೋಸ್ಟರ್ ಹೊರ ಬಂದಿದೆ. ಭಾರತ ದ ಬಾವುಟದ ಬಣ್ಣವಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಮೂರು ವಿಶೇಷ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.

Leave a Reply