ರರ್ಷಿತಾ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಆಳಿದ್ದರು ಹಾಗೂ ‘ಸುಂಟರಗಾಳಿ’ ಎಂದೇ ಬಿಂಬಿತವಾಗಿ ಯುವಕರ ಮನಸ್ಸಿಗೆ ಕಿಚ್ಚು ಹಬ್ಬಿಸಿದ್ದರು. ಪ್ರೇಮ್ ಅವರು ಕರಿಯ, ಜೋಗಿ. ರಾಜ್ ಚಿತ್ರಗಳನ್ನು ನಿರ್ದೇಶಿಸಿ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಮೂಲಕ ನಟನಾ ವೃತ್ತಿಗೂ ಕಾಲಿರಿಸಿದ್ದರು.
ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ಪಾಲಿಗೆ ಇಂದು ವಿಶೇಷ ದಿನ. ಕಾರಣ ಇವತ್ತಿಗೆ ಇವರ ಮದುವೆಯಾಗಿ 11 ವರ್ಷಗಳಾದವು. ಮಾರ್ಚ್ 9, 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರಿಗೆ ಸೂರ್ಯ ಎಂಬ ಮಗನೊಬ್ಬನಿದ್ದಾನೆ.
ಈ ಹಿನ್ನಲೆಯಲ್ಲಿ ಟ್ವೀಟ್ ನಲ್ಲಿಯೂ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ ಈ ದಂಪತಿಗಳು. ಇದೀಗ ಇವರಿಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಅವರು ಹೀಗೆಯೇ ಇರಲಿ ಎಂಬುದು ಸಹ ನಮ್ಮ ಹಾರೈಕೆ.