ಮುತ್ತೋಡಿಯಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದ ವಿಶೇಷ ಅತಿಥಿ

ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ ನಿಲ್ ಗಾಯ್ (ಬ್ಲು ಬುಲ್) ಪಾಣಿ ಪ್ರತ್ಯಕ್ಷವಾಗಿದ್ದು ಅಚ್ಚರಿ ಮೂಡಿಸಿದೆ.

ಸಫಾರಿ ವೇಳೆ ಪ್ರವಾಸಿಗರೊಬ್ಬರಿಗೆ ನಿಲ್ ಗಾಯ್ ಕಾಣಿಸಿಕೊಂಡಿದ್ದು ತಮ್ಮ‌ ಕ್ಯಾಮರಾದಲ್ಲಿ ಫೋಟೋ ಸೆರೆ ಹಿಡಿದಿದ್ದಾರೆ. ಇಡೀ ಭದ್ರಾ ಅಭಯಾರಣ್ಯದಲ್ಲೇ ಈ ಹಿಂದೆ ನಿಲ್ ಗಾಯ್ ಕಾಣಿಸಿಕೊಂಡಿಲ್ಲ. ಹಾಗೂ ಭದ್ರಾ ಅರಣ್ಯದಲ್ಲಿ ಈ ಪ್ರಾಣಿ ಇದ್ದ ಬಗ್ಗೆ ದಾಖಲೆಗಳೂ ಇಲ್ಲ ಎಂದು ಭದ್ರಾ ಅರಣ್ಯ ಅಧಿಕಾರಿಗಳಿಂದ ಸ್ಪಷ್ಟ ಪಡಿಸಿದ್ದಾರೆ.

ಬ್ಲೂ ಬುಲ್ ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ವಾಸಿಸುವ ಪ್ರಾಣಿಯಾಗಿದ್ದು ದಿಢೀರನೆ ಭದ್ರಾ ಅರಣ್ಯದಲ್ಲಿ ಪ್ರತ್ಯಕ್ಷವಾಗಿದ್ದು ಅಚ್ಚರಿ ಮೂಡಿಸಿದೆ.

1950 ರಲ್ಲಿ ಈ ಬ್ಲೂ ಬುಲ್ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ಬಗ್ಗೆ ಮಾತ್ರ ದಾಖಲೆ ಇದೆ.

ಸಾಮಾನ್ಯವಾಗಿ ಮಹರಾಷ್ಟ್ರ, ಮದ್ಯಪ್ರದೇಶ ಮೊದಲಾದಾ ರಾಜ್ಯಗಳಲ್ಲಿ ಮಾತ್ರ ಕಂಡು ಬರುವ ಪ್ರಾಣಿಯಿದು ಎನ್ನಲಾಗಿದೆ. ಹುಲಿ – ಚಿರತೆಯಂತಹ ಮಾಂಸಹಾರಿ ಪ್ರಾಣಿಗಳಿಗೆ ಸುಲಭವಾಗಿ ಸಿಗೋ ಪ್ರಾಣಿಯಾಗಿದ್ದು ಕಾಡಿನೊಳಗೆ ಬಹಳ ದಿನ ಬದುಕುವುದು ಕಷ್ಟ ಎಂದು ಹೇಳಲಾಗುತ್ತದೆ.

ಸಂರಕ್ಷಣೆ ದ್ರಷ್ಟಿಯಿಂದ ಭದ್ರಾ ಕಾಡಿನಲ್ಲಿ ಇದನ್ನ ಪತ್ತೆ ಮಾಡುವಂತೆ ಅರಣ್ಯ ಸಿಬ್ಬಂದಿಗೆ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್ ಸೂಚನೆ ನೀಡಿದ್ದಾರೆ.

Leave a Reply