ಕೊಪ್ಪಳದ ಕಿಮ್ಸ್ ಅದ್ವಾನವಾಗಿದೆ

ಕೊಪ್ಪಳ:ಮೆಡಿಕಲ್ ಕಾಲೇಜ್ ಅದ್ವಾನವಾಗಿದೆ. ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದೆ ಅಲ್ಲಿನ ವೈದ್ಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಪರದಾಡುವಂತಾಗಿದೆ. ಕೊಪ್ಪಳದ ಕಿಮ್ಸ್ ಗೆ ಕಳೆದ 15 ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೆ ರಾತ್ರಿ ಕತ್ತಲಲ್ಲಿ ಮುಳುಗಬೇಕಾಗಿದೆ.

ಇದರ ಜೊತೆಗೆ ವಿದ್ಯಾರ್ಥಿಗಳ ಹಾಸ್ಟೇಲ್ ಸೇರಿದಂತೆ ಕಾಲೇಜಿಗೂ ಕುಡಿಯುವ ಹಾಗೂ ಬಳಕೆಯ ನೀರು ಸಹ ಪೂರೈಕೆಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು 15 ದಿನಗಳಿಂದ ಸ್ನಾನ ಮಾಡದೆ ಹಾಗೆ ಇರಬೇಕಾದ ಕರ್ಮ ಬಂದೊದಗಿದೆ. ತಾಂತ್ರಿಕ ತೊಂದರೆಯಿಂದಾಗಿ ವಿದ್ಯುತ್ ಕಟ್ ಆಗಿದೆ. ಜನರೇಟರ್ ಮೂಲಕ ಕೆಲವೊಂದಿಷ್ಟು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪೇಚಿಗೆ ಸಿಲುಕುವಂತಾಗಿದೆ. ಕುಡಿಯಲು ಹಾಗೂ ಬಳಕೆಯ ನೀರು ಸಹ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಪ್ರಾಥಃಕಾಲದ ನಿತ್ಯ ಕರ್ಮಗಳಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಕ್ಟಿಕಲ್ ತರಗತಿಗಳಿಗೂ ತೊಂದರೆಯಾಗಿದೆ. ನೂರಾರು ಕೋಟಿ ರುಪಾಯಿ ಖರ್ಚು ಮಾಡಿ ಕೊಪ್ಪಳ ಕಿಮ್ಸ್ ಆರಂಭ ಮಾಡಲಾಗಿದೆಯಾದರೂ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಇರೋದು ದುರಂತ. ಒಟ್ಟಾರೆಯಾಗಿ ಕೊಪ್ಪಳದ ಕಿಮ್ಸ್ ಅದ್ವಾನವಾಗಿದೆ.

Leave a Reply