ಸಿ.ಪಿ.ಯೋಗೇಶ್ವರ್ ಸೆಡ್ಡು ಹೊಡೆದ್ರ ತಮ್ಮ ಸಿ.ಪಿ.ರಾಜೇಶ್ ??.

ರಾಮನಗರ(ಮಾ.12): ಸದ್ಯಕ್ಕೆ ರಾಮನಗರ ಜಿಲ್ಲೆಯಲ್ಲಿ ಬದ್ದವೈರಿಗಳಾಗಿರುವ ರಾಜಕಾರಣಿಗಳೆಂದರೆ ಅದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್. ಇವರಿಬ್ಬರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈಗಲೂ ಸೆಣೆಸಾಡುತ್ತಿದ್ದಾರೆ. ಮತ್ತೊಂದೆಡೆ ಡಿಕೆಶಿ ತಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ವೈ ತಮ್ಮ ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಪಿ.ರಾಜೇಶ್ ಕೂಡಾ ಕಚ್ಚಾಡುತ್ತಿದ್ದಾರೆ.

ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಬಿಟ್ಟ ನಂತರ ಡಿ.ಕೆ.ಶಿ ಹಾಗೂ ಸಿ.ಪಿ.ವೈ ನಡುವೆ ಕೋಲ್ಡ್ ವಾರ್ ಅಲ್ಲಲ್ಲೇ ನಡೆಯುತ್ತಿದೆ. ಇನ್ನು ಯೋಗೇಶ್ವರ್ ಬಿಜೆಪಿ ಸೇರಿದ ಬಳಿಕ ಡಿ.ಕೆ.ಶಿ ಜೊತೆಗೆ ಎಲ್ಲೂ ವೇದಿಕೆ ಹಂಚಿಕೊಂಡಿರಲಿಲ್ಲ, ಆದರೆ ಇಂದು ಸಿ.ಪಿ.ವೈ ಸಹೋದರ ಸಿ.ಪಿ.ರಾಜೇಶ್ ಇಂದು ಡಿ.ಕೆ.ಬ್ರದರ್ಸ್ ಜೊತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ನೆರೆದಿದ್ದ ಜನರಿಗೆ ಶಾಕ್ ಕೊಟ್ಟಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಗುದ್ದಲಿ ಪೂಜೆ ಹಾಗೂ ನಾಡಪ್ರಭು ಮಾಗಡಿ ಕೆಂಪೇಗೌಡರ ಪ್ರತಿಮೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಮನಗರ ಜಿ.ಪಂ ಅಧ್ಯಕ್ಷ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಸಹೋದರ ಸಿ.ಪಿ.ರಾಜೇಶ್ ಡಿ.ಕೆ.ಬ್ರದರ್ಸ್ ಜೊತೆಗೆ ವೇದಿಕೆ ಹಂಚಿಕೊಂಡರು.

ಇನ್ನು ಸಿ.ಪಿ.ರಾಜೇಶ್ ವೇದಿಕೆಗೆ ಬರುತ್ತಿದ್ದಂತೆ ನಗುನಗುತ್ತಲೇ ಸಿ.ಪಿ.ರಾಜೇಶ್ ರನ್ನ ನೋಡಿದ ಡಿ.ಕೆ.ಶಿ ಏನೋ ಹೇಳಿ ಸುಮ್ಮನಾದರು, ಆದರೆ ಪಕ್ಕದಲ್ಲೇ ಕುಳಿತಿದ್ದ ಸಂಸದ ಡಿ.ಕೆ.ಸುರೇಶ್ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಇದ್ದದ್ದು ಕಂಡುಬಂತು. ಇನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸಿ.ಎಂ.ಲಿಂಗಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

Leave a Reply