ಬಾಲಯ್ಯ ಮತ್ತು ವಿದ್ಯಾ ಬಾಲನ್ ಬಗ್ಗೆ ಹೀಗೊಂದು ವಿಷ್ಯ ಹರಿದಾಡುತ್ತಿದೆ

ತೆಲುಗಿನ ನಂದಮೂರಿ ತಾರಕ ರಾಮರಾವ್ ರವರ ಜೀವನ ಚರಿತ್ರೆ ಸಿನಿಮಾವಾಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. NTR ಪಾತ್ರದಲ್ಲಿ ಅವರ ಮಗ ಬಾಲಯ್ಯ ಅಲಿಯಾಸ್ ಬಾಲಕೃಷ್ಣ ನಟಿಸುತ್ತಿದ್ದಾರೆ. ಟಾಲಿವುಡ್ ನ ಸ್ಪೆಷಲ್ ಕಥೆಗಳ ನಿರ್ದೇಶಕ ಅಂತ ಗುರುತಿಸಿಕೊಂಡಿರುವ ತೇಜ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಕ್ಕೆ ಮುಖ್ಯ ಪಾತ್ರಗಳ ಆಯ್ಕೆ ನಡೆಯುತ್ತಿದ್ದು ಎನ್,ಟಿ .ಆರ್ ರವರ ಮೊದಲ ಪತ್ನಿ ಬಸವತಾರಕಂ ಪಾತ್ರಕ್ಕೆ ಸೂಕ್ತ ನಟಿಯನ್ನು ಹುಡುಕುತ ರೋಸಿದ್ದ ತಂಡಕ್ಕೆ ಈಗ ನಿರಾಳ ಸಿಕ್ಕಂತಾಗಿದೆ. ಬಸವತಾರಕಂ ರವರ ಪಾತ್ರಕ್ಕೆ ಡರ್ಟಿ ಗರ್ಲ್ ವಿಧ್ಯಾಬಾಲನ್ ರನ್ನು ಆಯ್ಕೆ ಮಾಡುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದೆ ಚಿತ್ರತಂಡ.

ವಿಧ್ಯಾಬಾಲನ್ ದಕ್ಷಿಣ ಭಾರತ ಸೇರಿದಂತೆ ಹಿಂದಿ ಸಿನಿಮಾಗಳಲ್ಲೂ ಗೊತ್ತಿರುವ ಮುಖವಾಗಿರುವುದರಿಂದ ಆ ಪಾತ್ರಕ್ಕೆ ಅವಳು ಸೂಕ್ತ ಆಯ್ಕೆ ಎಂದು ನಿರ್ದೇಶಕ ತೇಜ ಧೃಡಪಡಿಸಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ವಿಧ್ಯಾಬಾಲನ್ ಕೂಡ ಆ ಪಾತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ದೊಡ್ಡ ಮೊತ್ತದ ಸಂಭಾವನೆಯೊಂದಿಗೆ ತಂಡವನ್ನು ಸೇರಿಕೊಳ್ಳುತ್ತಿದ್ದಾಳಂತೆ.

ಎನ್ ಟಿ ಆರ್ ಜೀವನ ಚರಿತ್ರೆ ಕೇವಲ ತೆಲುಗು,ತಮಿಳು ಭಾಷೆಗಳಲ್ಲಷ್ಟೆ ಅಲ್ಲದೆ ಹಿಂದಿಯಲ್ಲೂ ತೆರೆ ಕಾಣಿಸುವ ತಯಾರಿಯನ್ನು ಚಿತ್ರತಂಡ ಮಾಡಿಕೊಳ್ಳುತ್ತಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Image result for vidya balan and baalaya

Leave a Reply