ಮೋಸ ಹೋದ ರಾಹುಲ್ ದ್ರಾವಿಡ್ ಮತ್ತು ಇತರೆ ಸ್ಪೋರ್ಟ್ಸ್ ದಿಗ್ಗಜರು

ಬೆಂಗಳೂರು : ಬೆಂಗಳೂರು ಮೂಲದ ಇನ್ವೆಸ್ಟ್ಮೆಂಟ್ ಕಂಪನಿಯ ನೂರಾರು ಜನರನ್ನು ಕೋಟಿಗಟ್ಟಲೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ, ಇವರಲ್ಲಿ ಪ್ರಮುಖರು ಖ್ಯಾತ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಬ್ಯಾಡ್ಮಿಂಟನ್ ದೃವತಾರೆ ಸೈನಾ ನೆಹ್ವಾಲ್ ಮತ್ತು ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಎನ್ನಲಾಗಿದೆ.

ಬೆಂಗಳೂರು ಸಿಟಿ ಪೊಲೀಸ್ ಪ್ರಕಾರ ‘ವಿಕ್ರಂ ಇನ್ವೆಸ್ಟ್ಮೆಂಟ್ ಕಂಪನಿ’ 800 ಕ್ಕೂ ಹೆಚ್ಚು ಜನರನ್ನು ಮೋಸ ಮಾಡಲಾಗಿದೆ. ಇವರಲ್ಲಿ ಸಿನೆಮಾ, ಕ್ರೀಡೆ, ರಾಜಕೀಯ ವಲಯದ ಹಲವು ಪ್ರಮುಖ ಹೆಸರು ಕೇಳಿ ಬರುತಿದೆ .

ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ , ಕಂಪನಿ ಮಾಲೀಕ ರಾಘವೇಂದ್ರ ಶ್ರೀನಾಥ್, ಮತ್ತು ಅಜೆಂಟ್ಗಳಾದ ಸುತರಾಂ ಸುರೇಶ್, ನರ್ಶಿಮಮೂರ್ತಿ, ಪ್ರಹಲಾದ್ ಮತ್ತು ಕೆ ಸಿ ನಾಗರಾಜ್ ಎಂಬುವವರನ್ನು ಬಂಧಿಸಲಾಗಿದೆ .

ರಾಘವೇಂದ್ರ ಶ್ರೀನಾಥ್ , ಒಬ್ಬ ಪ್ರಸಿದ್ಧ ಕ್ರೀಡಾ ಪತ್ರಿಕಾರರು. ಇವರು ಎಲ್ಲ ಪ್ರಸಿದ್ದ ಕ್ರೀಡಾ ಪಟ್ಟುಗಳ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮನವೊಲಿಸುವುದರಲ್ಲಿ ಸಫಲರಾಗಿದ್ದರು ಎಂದು ಹೇಳಲಾಗುತ್ತಿದೆ.

ಇವರನ್ನು 14 ದಿನ ಪೊಲೀಸ್ ಬಂಧನಕ್ಕೆ ನೀಡಲಾಗಿದೆ . ಈ ಗಾಂಗ್ 300 ಕೋಟಿಗೂ ಹೆಚ್ಚು ಮೋಸ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಲ್ಲಿ ಬಂಡವಾಳ ಹೂಡಿದವರ ಇತರೆ ಜನರ ಹೆಸರು ಹೇಳಿರುವುದಾಗಿ , ಅವರ ಬ್ಯಾಂಕ್ ಖಾತೆ ವಿಚಾರಣೆ ನಡೆಸುತ್ತಿದ್ದಾರೆ.

ಯಾರು ಇದರ ಸಂಬಂಧ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Leave a Reply