65 ಇಂಡಿಗೋ, ಗೋಏರ್‌ ವಿಮಾನಗಳ ಹಾರಾಟ ರದ್ದು

ಇಂಡಿಗೋ ಹಾಗೂ ಗೋಏರ್‌ ಸಂಸ್ಥೆಗಳ ಕೆಲವು ವಿಮಾನಗಳಲ್ಲಿ ಎಂಜಿನ್‌ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ 8 ವಿಮಾನಗಳು ಅರ್ಧಕ್ಕೆ ಹಾರಾಟ ಸ್ಥಗಿತಗೊಳಿಸಿದ್ದವು. ಇಂಡಿಗೋ ಮತ್ತು ಗೋಏರ್‌ಗಳು ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಸೂಚನೆಯಂತೆ ಮಂಗಳವಾರ ತಮ್ಮ 65 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.

ಸೋಮವಾರದಂದು ಅಹಮದಾಬಾದ್‌ನಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನ ಆಗಸದಲ್ಲೇ ಎಂಜಿನ್‌ ವೈಫಲ್ಯದಿಂದಾಗಿ 40 ನಿಮಿಷದೊಳಗೆ ಅಹಮದಾಬಾದ್‌ಗೆ ಮರಳಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ತಡೆಯೊಡ್ಡಿದೆ.

ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತ, ಹೈದರಾಬಾದ್‌, ಬೆಂಗಳೂರು, ಪಟನಾ, ಶ್ರೀನಗರ, ಭುವನೇಶ್ವರ, ಅಮೃತಸರ, ಗುವಾಹಟಿ ಸೇರಿದಂತೆ ಹಲವು ನಗರಗಳಿಂದ ಹೊರಡಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ. ದೇಶಾದ್ಯಂತ ತನ್ನ ಪ್ರಾದೇಶಿಕ ವಿಮಾನ ಹಾರಾಟಗಳನ್ನು ರದ್ದುಗೊಳಿಸಿರುವುದಾಗಿ ಇಂಡಿಗೋ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Related image

 

Leave a Reply