ಪ್ರತೀಕಾರ ಮೆರೆದ ನಕ್ಸಲರು – 8 CRPF ಪೊಲೀಸರು ಹತ್ಯೆ

ಛತ್ತೀಸ್‌ಘಡದ ಸುಕ್ಮಾ ಜಿಲ್ಲೆ ನಕ್ಸಲರ ಪ್ರಾಬಲ್ಯ ಇರುವ ಅರಣ್ಯ ಪ್ರದೇಶವಾಗಿದ್ದು , ನಕ್ಸಲರು ಮಂಗಳವಾರ ಅಟ್ಟಹಾಸಗೈದಿದ್ದು ಕೂಂಬಿಂಗ್‌ಗೆ ತೆರಳುತ್ತಿದ್ದ CRPF ವಾಹನವನ್ನೆ ಸ್ಫೋಟಕವಿಟ್ಟು ಉಡಾಯಿಸಿದ್ದು 8 ಮಂದಿ ಯೋಧರು ಹುತಾತ್ಮರಾಗಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಣ್ಯದಲ್ಲಿ ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮಾವೋವಾದಿಗಳು ನಡೆಸಿದ ಈ ಆಕ್ರಮಣದಲ್ಲಿ CRPFನ ಎಂಟು ಪೊಲೀಸರು ಹತರಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ದಿನಗಳ ಹಿಂದಷ್ಟೇ ಸಿಆರ್‌ಪಿಎಫ್ ಯೋಧರು ಕೂಂಬಿಂಗ್‌ನಲ್ಲಿ 10 ಮಂದಿ ನಕ್ಸಲರನ್ನು ಹತ್ಯೆಗೈದಿದ್ದರು. ಆ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳು ಯೋಧರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದ್ದು ಕೂಂಬಿಂಗ್‌ ಬಿರುಸುಗೊಳಿಸಲಾಗಿದೆ.

Related image

Leave a Reply