ನಟಿ ಸಿಂಧು ಮೆನನ್ ವಿರುದ್ಧ FIR- ಸಹೋದರ ಅರೆಸ್ಟ್

ಕಚೇರಿಗೆ ಕಟ್ಟಡ ಬೋಗ್ಯಕ್ಕೆ ಪಡೆದು ವಂಚನೆ ಎಸಗಿರೋ ಅರೋಪದಡಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ಹಾಗೂ ಸುಧಾ ರಾಜಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ನಟಿ ಸಿಂಧು ಮೆನನ್ ಕುಟುಂಬದ ವಿರುದ್ಧ ಮತ್ತೊಂದು ಹೀಗೊಂದು ಎಫ್‍ಐಆರ್ ದಾಖಲಾಗಿದೆ.

ಬಾಡಿಗೆ ಕಟ್ಟಡವನ್ನ ಸ್ವಂತದ್ದು ಎಂದು ಮನೋಜ್ ಉಲ್ಲೇಖಿಸಿದ್ದನು. ಅಷ್ಟೇ ಅಲ್ಲದೇ ಲೋನ್ ಗೆ ಶ್ಯೂರಿಟಿ ಗಣೇಶ್ ರಾವ್ ಎಂದು ಫಾರಂ 16 ರಲ್ಲಿ ಉಲ್ಲೇಖವಾಗಿತ್ತು. ಸಿಂಧು ಮೆನನ್ ಸಹೋದರನ ವಂಚನೆ ವಿರುದ್ಧ ಗಣೇಶ್ ರಾವ್ ದೂರು ನೀಡಿದ್ದು ಯಶವಂತಪುರ ಪೊಲೀಸರು ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮನೋಜ್ ಕಟ್ಟಡದ ದಾಖಲೆಗಳನ್ನು ನಕಲು ಮಾಡಿ ಬ್ಯಾಂಕಿನಲ್ಲಿ ಲೋನ್ ಮಾಡಿಸಿದ್ದ. ಕಚೇರಿ ಪ್ರಾರಂಭಿಸಲು ಕಮರ್ಷಿಯಲ್ ಜಾಗ ಬೇಕು ಎಂದು ಗಣೇಶ್ ರಾವ್‍ರನ್ನು ಸಂಪರ್ಕಿಸಿದ್ದ. ನಂತರ ಮನೋಜ್ ಕಟ್ಟಡ ಮಾಲೀಕ ಗಣೇಶ್ ರಾವ್ ರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕಟ್ಟಡದ ದಾಖಲೆಗಳನ್ನ ಪಡೆದಿದ್ದ. ಮೂರು ತಿಂಗಳ ಬಳಿಕ ಕಚೇರಿ ಬೇಡ ಎಂದು ಬೀಗ ವಾಪಸ್ ನೀಡಿದ್ದು, ಬ್ಯಾಂಕ್ ಲೋನ್ ಆಗಿಲ್ಲ. ನಿಮ್ಮ ಮಳಿಗೆ ಬೇಡ ಎಂದು ಮನೋಜ್ ಹೇಳಿದ್ದ. ಅಗ್ರೀಮೆಂಟ್ ದಾಖಲೆಗಳನ್ನು ಕೇಳಿದಾಗ ತಂದು ಕೊಡುತ್ತೇನೆ ಎಂದು ಮನೋಜ್ ಕೈ ಎತ್ತಿದ್ದ. ಗಣೇಶ್ ರಾವ್ ಮನೆ ದಾಖಲೆಗಳನ್ನು ಅಡವಿಟ್ಟು ವಿಜಯಾ ಬ್ಯಾಂಕಿನಲ್ಲಿ ಲೋನ್ ಗೆ ಅರ್ಜಿ ಹಾಕಿದ್ದ.

Leave a Reply