ಆಲಿಯಾ ಹುಟ್ಟುಹಬ್ಬಕ್ಕೆ ರಣಬೀರ್ ಸರ್ಪ್ರೈಸ್ ಏನು??

ಬಾಲಿವುಡ್ ನಲ್ಲಿ ಹೊಸ ಜೋಡಿಯೊಂದು ಸುದ್ದಿ ಮಾಡ್ತಿದೆ. ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಹೆಸರು ಕೇಳಿ ಬಂದಿದೆ. ದೀಪಿಕಾ, ಕತ್ರಿನಾ ನಂತ್ರ ಈಗ ಆಲಿಯಾ ಹೆಸರು ರಣಬೀರ್ ಜೊತೆ ಸೇರಿದೆ. ಸದ್ಯ ಈ ಜೋಡಿ ಬ್ರಹ್ಮಸ್ತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದೆ.

ರಣಬೀರ್ ಹಾಗೂ ಚಿತ್ರ ನಿರ್ದೇಶಕ ಅಯಾನ್, ಆಲಿಯಾಗೆ ದೊಡ್ಡ ಸರ್ಪ್ರೈಸ್ ನೀಡಲಿದ್ದಾರಂತೆ. ದಿನಪೂರ್ತಿ ಶೂಟಿಂಗ್ ಮಾಡುವ ಆಲಿಯಾ ಸಂಜೆ ಚಿತ್ರ ತಂಡದ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾಳಂತೆ. ಈ ಬಾರಿ ಮನೆಯಿಂದ ದೂರವಿರುವ ಕಾರಣ ಆಕೆ ಹುಟ್ಟಹಬ್ಬವನ್ನು ವಿಶೇಷವಾಗಿ ಆಚರಿಸಲು ರಣಬೀರ್ ಮುಂದಾಗಿದ್ದಾನೆ.

ಮಾರ್ಚ್ 15ರಂದು ಆಲಿಯಾ ಭಟ್ 25ನೇ ವಸಂತಕ್ಕೆ ಕಾಲಿಡ್ತಿದ್ದಾಳೆ. ಆಕೆ ಹುಟ್ಟುಹಬ್ಬಕ್ಕೆ ಯಾರು ಏನು ತಯಾರಿ ಮಾಡಿದ್ದಾರೋ ಗೊತ್ತಿಲ್ಲ. ರಣಬೀರ್ ಕಪೂರ್ ಮಾತ್ರ ಭರ್ಜರಿ ತಯಾರಿ ನಡೆಸಿದ್ದಾನಂತೆ. ಬಲ್ಗೇರಿಯಾದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸೆಟ್ ನಲ್ಲಿಯೇ ಆಲಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ.

Related image

Leave a Reply