ಬಾಲಿವುಡ್ ನ ಅಮೀರ್ ಖಾನ್ ಗೆ ಇಂದು 53 ನೇ ಹುಟ್ಟು ಹಬ್ಬದ ಸಂಭ್ರಮ. 14 ಮಾರ್ಚ 1965 ರಂದು ಜನಿಸಿದ ಇವರು, 1984 ರಲ್ಲಿ ತೆರೆ ಕಂಡ ‘ಹೋಳಿ’ ಚಿತ್ರದ ಮೂಲಕ ಚಿತ್ರರಂಗಕ್ಕ ಪಾದಾರ್ಪಣೆ ಮಾಡಿದರು. ಆದರೆ ಖ್ಯಾತಿ ಕೊಟ್ಟಿದ್ದು “ಖಯಾಮತ್ ಸೇ ಖಯಾಮತ್” ಚಿತ್ರ. ಈ ಚಿತ್ರಕ್ಕೆ ಉತ್ತಮ ನಟ ಪ್ರಶಸ್ತಿಯನ್ನು ಪಡೆದರು.
ರಾಜಾ ಹಿಂದೂಸ್ಥಾನಿ, ದಿಲ್, ದಂಗಲ್, ಗಜಬ್ ಕಾ, ಗುಲಾಮ್, ಹಮ್ ಹೇ ರಾಹೀ ಪ್ಯಾರ್ ಕೆ, ಸರ್ಫರೋಷ್, ಧೂಮ್3 , ಪೀಕೆ, ಲಗಾನ್ ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ಅಮೀರ್ ಖಾನ್. ಹಾಗೂ ನಟನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೂ ಗುರಿಯಾಗಿದ್ದರು.
ಅಮೀರ್ ಖಾನ್ ಗೆ ಭಾರತ ಮಾತ್ರವಲ್ಲದೇ ಚೀನಾ ದೇಶದಲ್ಲಿಯೂ ಅಭಿಮಾನಿಗಳಿದ್ದು, ಇವರ ಸಿನಿಮಾಗಳು ಚೀನಾದಲ್ಲಿಯೂ ತೆರೆ ಕಾಣುತ್ತವೆ. “3 ಈಡಿಯೇಟ್ಸ್. ದಂಗಲ್ ಸಿನಿಮಾಗಳು ಚೀನಾದಲ್ಲಿ ತೆರೆ ಕಂಡಿದ್ದವು. ಸಧ್ಯಕ್ಕೀಗ ‘ಥಗ್ಸ್ ಆಗ್ ಹಿಂದೂಸ್ಥಾನಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ರೊಂದಿಗೆ ನಟಿಸುತ್ತಿದ್ದಾರೆ.