ಬಾಲಿವುಡ್ ಗೆ ಮತ್ತೊಂದು ಆಘಾತ – ನರೇಂದ್ರ ಝಾ ಇನ್ನಿಲ್ಲ

ನಟಿ ಶ್ರೀದೇವಿ ನಿಧನದ ನಂತ್ರ ಬಾಲಿವುಡ್ ಮತ್ತೊಂದು ಸಾವಿನ ನೋವಿನಲ್ಲಿದೆ. ಹಿರಿಯ ನಟ ನರೇಂದ್ರ ಝಾರನ್ನು ಬಾಲಿವುಡ್ ಕಳೆದುಕೊಂಡಿದೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನರೇಂದ್ರ ಝಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನರೇಂದ್ರ ಝಾಗೆ 55 ವರ್ಷ ವಯಸ್ಸಾಗಿತ್ತು. ಮೂರನೇ ಬಾರಿ ಹೃದಯಾಘಾತವಾಗಿದೆ ಎಂದು ಮೂಲಗಳು ಹೇಳಿವೆ. ಫಾರ್ಮ್ ಹೌಸ್ ನಲ್ಲಿಯೇ ನರೇಂದ್ರ ಝಾ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತಿನ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದ ನರೇಂದ್ರ ಝಾ ಸಾಕಷ್ಟು ಟಿವಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. 70ಕ್ಕೂ ಹೆಚ್ಚು ಟಿವಿ ಶೋದಲ್ಲಿ ಕಾಣಿಸಿಕೊಂಡಿದ್ದ ನರೇಂದ್ರ ಝಾ ಶ್ರೀದೇವಿ ಅಭಿನಯದ ಕಾಬಿಲ್ ಹಾಗೂ ಇತ್ತೀಚಿಗೆ ತೆರೆಗೆ ಬಂದ ಶಾರುಕ್ ಅಭಿನಯದ ರಾಯಿಸ್ ನಲ್ಲಿ ನಟಿಸಿದ್ದರು. ಹಿಂದಿ ಜೊತೆಗೆ ತಮಿಳು, ತೆಲಗು ಚಿತ್ರಗಳಲ್ಲೂ ಝಾ ನಟಿಸಿದ್ದರು. ನರೇಂದ್ರ ಝಾ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

Related image

Leave a Reply