ಭೌತವಿಜ್ಞಾನಿ ಪ್ರೊ. ಸ್ಟೀಫನ್‌ ಹಾಕಿಂಗ್‌ ವಿಧಿವಶ

ಲಂಡನ್ ನ ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಾಕಿನ್ಸ್ ಅವರ ಮಕ್ಕಳಾದ ಲೂಸಿ, ರಾಬರ್ಟ್, ಮತ್ತು ಟಿಮ್, ನಿಧನದ ಬಗ್ಗೆ ಪ್ರಕಟಣೆ ನೀಡಿದ್ದಾರೆ.

8 ಜನವರಿ 1942ರಲ್ಲಿ ಜನಿಸಿದ್ದ ಸ್ಟೀಫನ್‌ ಅವರು, ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು. ಹಾಕಿಂಗ್‌ ತಮ್ಮ ಸುದೀರ್ಘ ಕಾಲದ ಅನುಭವದ ಮೂಲಕ ಹಲವು ಪುಸ್ತಕಗಳು ಹಾಗೂ ಅಧ್ಯಯನ ಗ್ರಂಧಗಳನ್ನು ವಿಜ್ಞಾನ ಲೋಕಕ್ಕೆ ನೀಡುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಪಡೆದಿದ್ದರು.

ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ವ್ಯಕ್ತಿಯಾಗಿದ್ದ ಹಾಕಿಂಗ್‌ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದರು. ನಮ್ಮ ಪ್ರೀತಿಪಾತ್ರ ತಂದೆಯನ್ನು ಕಳೆದುಕೊಂಡು ನಾವು ದುಃಖದಲ್ಲಿದ್ದೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Image result for stephen hawking

Leave a Reply