ಖೋಟಾ ನೋಟು ಚಲಾವಣೆ ಮಾಡುತಿದ್ದ ಇಬ್ಬರ ಆರೋಪಿಗಳ ಬಂಧನ

ಬೆಳಗಾವಿಯಲ್ಲೊಂದು ನಕಲಿ ನೋಟು ಚಲಾವಣೆಯ ಪ್ರಕರಣ ನಡೆದಿದೆ. ಚಲಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಮಿಯಾ ಖೋಟಾನೋಟು ಚಲಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ. ಕೆಲ ದಿನಗಳ ಹಿಂದಷ್ಟೇ ಮಿಯಾ ಎಂಬಾತನನ್ನು ಪೊಲೀಸರು ಪುಣೆಯಲ್ಲಿ ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಚಿಕ್ಕೋಡಿ ತಾಲೂಕು ನಿಪ್ಪಾಣಿ ಪಟ್ಟಣದಲ್ಲಿ ಕೆ ದಿನ ವಾಸವಾಗಿರುವ ಕುರಿತು ಮಿಯಾ ಬಾಯ್ಬಿಟ್ಟಿದ್ದ. ಅಲ್ಲದೆ, ಕೆಲ ಸ್ಥಳೀಯರೊಂದಿಗೆ ಸೇರಿಕೊಂಡು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ.

ಮಿಯಾ ಕೊಟ್ಟ ಮಾಹಿತಿಯನ್ವಯ ಬೆಳಗಾವಿಯ ಖೋಟಾನೋಟು ಅಡ್ಡೆ ಮೇಲೆ ದಾಳಇ ನಡೆಸಿದ ಎನ್ಐಎ ರೂ.2 ಸಾವಿರ ಮುಖಬೆಲೆಯ 41 ಖೋಟಾನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಕ್ಕೋಡಿ ನಿವಾಸಿ ಅಶೋಕ್ ಕಂಬಾರ್ (45) ಮತ್ತು ಪಶ್ಚಿಮ ಬಂಗಾಳ ನಿವಾಸಿ ದಾಲಿಮ್ ಮಿಯಾ (21) ಬಂಧನಕ್ಕಳಗಾದ ಆರೋಪಿಗಳಾಗಿದ್ದಾರೆ.

Leave a Reply