ಹಾಸನ ತಲುಪಿದ ವೀರ ಯೋಧನ ಪಾರ್ಥೀವ ಶರೀರ, ಎ. ಮಂಜು ಕಾರ್ಯ ಶ್ಲಾಘಿಸಿದ ಹಾಸನ ಜನತೆ.

ಹಾಸನ: ನಕ್ಸಲ್ ದಾಳಿಗೆ ಬಲಿಯಾದ ಹಾಸನದ ವೀರ ಯೋಧನ ಪಾರ್ಥೀವ ಶರೀರ ಇಂದು ರಾತ್ರಿ ಹಾಸನಕ್ಕೆ ತಲುಪಿತು.

ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ವೀರ ಯೋಧನ ಪಾರ್ಥೀವ ಶರೀರ ಇಂದು ಹಾಸನದ ಜಿಲ್ಲಾಸ್ಪತ್ರೆಗೆ ತಲುಪಿತು.

ಜಿಲ್ಲಾ ಉಸ್ತುವಾರಿ ಸಚಿವ ಎ,ಮಂಜು ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಸಚಿವ ಎ,ಮಂಜುರವರು ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ಪಾರ್ಥಿವ ಶರೀರವನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು‌.

ಸಚಿವರು ಮೃತ ಯೋಧ ಚಂದ್ರುವಿನ ಮಡದಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ರು.

ನಾಳೆ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ
ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತ್ರ ಹುಟ್ಟೂರು ಹರದನೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

Leave a Reply