ಮಂಡ್ಯದಲ್ಲಿ ಏರೋಪ್ಲೇನ್ ಮಾದರಿ ವಿಚಿತ್ರ ಮೀನು‌

ಮಂಡ್ಯ :ಏರೋಪ್ಲೇನ್ ಮಾದರಿಯ ಅಪರೂಪದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಸಮೀಪದ ‘ಮದ್ದೂರಮ್ಮ ಕೆರೆಯಲ್ಲಿ ಬೆಳಕಿಗೆ ಬಂದಿದೆ. ದೇಶಹಳ್ಳಿ ಗ್ರಾಮದ ಮೀನುಗಾರ ನಾಗರಾಜ ನಾಯಕ್ ಅವರು ಎಂದಿನಂತೆ ಮೀನು ಹಿಡಿಯಲು ಕೆರೆಯಲ್ಲಿ ಬಲೆ ಬೀಸಿದ್ದ ವೇಳೆ ಮಧ್ಯಾಹ್ನ ಮೀನಿನ ಬಲೆಯನ್ನು ಎಳೆದು ಪರೀಕ್ಷಿಸಿದಾಗ, 1ಕೆಜಿ ತೂಕದ ಏರೋಪ್ಲೇನ್ ಮಾದರಿ ಹೋಲುವ ಈ ವಿಶೇಷ ಮೀನು ಪತ್ತೆಯಾಗಿದೆ.ಕಂದು ಬಣ್ಣದ ಈ ಮೀನಿನ ಮೈ ಮೇಲೆ ಹಳದಿ ಬಣ್ಣದ ಗೆರೆಗಳಿವೆ. ಮೀನಿನ ಬಾಯಿ ತಿಮಿಂಗಲದ ಬಾಯಿಯಂತಿದ್ದು, ಮೀನಿನ ಎರಡು ಬದಿಯಲ್ಲಿ ನಾಲ್ಕು ರೆಕ್ಕೆಗಳಿವೆ. ಮೀನಿನ ಮೇಲ್ಭಾಗದಲ್ಲಿ ನಾಲ್ಕು ಹಂತದ ಚೂಪಾದ ಮುಳ್ಳುಗಳಿವೆ.

ಇದೇ ಮೊದಲ ಬಾರಿಗೆ ಈ ರೀತಿಯ ವಿಶೇಷ ಮೀನು ಇದೇ ಮೊದಲ ಬಾರಿಗೆ ನಮ್ಮ ಕೆರೆಯಲ್ಲಿ ಸಿಕ್ಕಿದೆ. ಈ ಹಿಂದೆ ಈ ರೀತಿಯ ಮೀನು ನಾನು ನೋಡಿರಲಿಲ್ಲ. ಇದು ಯಾವ ಜಾತಿಯ ಮೀನು ತಿಳಿದಿಲ್ಲ.

ಬಲೆಯಲ್ಲಿ ಸಿಲುಕಿ ಈಚೆ ಬಂದ ಮೇಲೂ ಬದುಕಿದ್ದ ಈ ಮೀನನ್ನು ರೈತ ಶೈಲೇಂದ್ರ ಅವರ ತೋಟದ ಬಾವಿಯಲ್ಲಿ ಬಿಡಲಾಗಿದೆ’ ಎಂದು ಮೀನುಗಾರ ನಾಗರಾಜನಾಯಕ್‌ ತಿಳಿಸಿದ್ರು.

Leave a Reply