ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ

ಚಿಕ್ಕಮಗಳೂರು : ಸಿಡಿಲಿನ ಹೊಡೆತಕ್ಕೆ ಮನೆ ಸುಟ್ಟು ಭಸ್ಮ

ಸಿಡಿಲಿನ ಹೊಡೆತಕ್ಕೆ ಮನೆವೊಂದು ಸುಟ್ಟು ಭಸ್ಮವಾಗಿ ಸಾವಿರಾರು ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರೋ ಘಟನೆ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ
ಬಾಳೆಹೊನ್ನೂರಿನಲ್ಲಿ ನಡೆದಿದೆ.

ಬಾಳೆಹೊನ್ನೂರಿನ ಎನ್.ಆರ್ ಪುರ ರಸ್ತೆಯಲ್ಲಿರುವ ಅವಿನಾಶ್ ಎಂಬುವವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಮನೆಯಲ್ಲಿದ್ದರು ಪ್ರಾಣೋಪಾಯದಿಂದ ಪಾರಾಗಿದ್ದಾರೆ. ನಿನ್ನೆ
ಸಂಜೆ ಸುರಿದ ಸಿಡಿಲು ಸಹಿತ ಮಳೆಗೆ ಸಿಡಿಲು ಬಡಿದು ಮನೆಯಲ್ಲಿದ್ದ ಟಿ.ವಿ ಸ್ಫೋಟಗೊಂಡಿದ್ದು ಟಿವಿ ಸ್ಪೋಟದಿಂದ ಇಡೀ ಮನೆಗೆ ಬೆಂಕಿ ಆವರಿಸಿ ಮನೆಯಲ್ಲಿದ್ದ ಸಾವಿರಾರು ರೂ ಮೌಲ್ಯದ ಗೃಹಪಯೋಗಿ ವಸ್ತುಗಳು

ಬೆಂಕಿಗಾಹುತಿಯಾಗಿವೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply