ಆಕಾಶ್ ಮೆಡಿಕಲ್ ಇನ್ಸ್‌ಟ್ಯೂಟ್ ಮಾಲೀಕ ಮುನಿರಾಜು ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ..?

ಬೆಂಗಳೂರು:ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಪ್‌ಐ.ಆರ್ ದಾಖಲು. ನಾನು ಆ ಮಹಿಳೆಯನ್ನು ನೋಡಿಯೇ ಇಲ್ಲ ಎಂದ ಮಾಲೀಕ ಮುನಿರಾಜು
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಆಕಾಶ್ ಮೆಡಿಕಲ್ ಇನ್ಸ್ಟಿಟ್ಯೂಟ್ ಮಾಲೀಕನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ಹಾಗೂ ಪ್ರಾಣ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಅಂದಹಾಗೆ ಇದೇ ೧೨ ರಂದು ಬೆಂಗಳೂರಿನ ೩೦ ವರ್ಷದ ಮಹಿಳೆಯೊಬ್ಬರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಕಾಶ್ ಇನ್ಸ್‌ಟ್ಯೂಟ್ ಮಾಲೀಕ ಮುನಿರಾಜು ವಿರುದ್ದ ಎಪ್‌ಐಆರ್ ದಾಖಲು ಮಾಡಿದ್ದಾರೆ.

ಇನ್ನೂ ದೂರನ್ನ ದಾಖಲಿಸಿರುವ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಆಕಾಶ್ ಇನ್ಸ್‌ಟ್ಯೂಟ್‌ನಲ್ಲಿ ಕೆಲಸವನ್ನ ಮಾಡುತ್ತಿದ್ದು ಮೆಡಿಕಲ್ ಆಸ್ಪತ್ರೆಯಲ್ಲಿ ಎಂಸಿಐ ಇನ್ಸ್‌ಪೆಕ್ಷನ್ ವೇಳೆ ನಖಲಿ ರೋಗಿಗಳನ್ನ ಆಸ್ಪತ್ರೆಗೆ ಕರೆತರಲಾಗುತ್ತಿತ್ತಂತೆ. ಈ ಕೆಲಸವನ್ನ ಆಕಾಶ್ ಮಾಲೀಕ ಮುನಿರಾಜು ಸೂಚನೆಯಂತೆ ಸಂತ್ರಸ್ಥೆ ಮಾಡುತ್ತಿದ್ದಳು ಎನ್ನಲಾಗಿದೆ. ಆದ್ರೆ ಸಂತ್ರಸ್ತ ಮಹಿಳೆ ಮಾಡುತಿದ್ದ ಕೆಲಸ ಎಂಸಿಐ ರೂಲ್ಸ್ ಗೆ ವಿರುದ್ದ ಎಂದು ತಿಳಿದು ಬಂದಿತ್ತು. ಈ ವಿಚಾರವಾಗಿ ಸಂತ್ತಸ್ತೆ ನಕಲಿ ರೋಗಿಗಳನ್ನು ಎಂಸಿಐ ಇನ್ಸ್ ಸ್ಪೇಕ್ಷನ್ ಗೆ ಕರೆತರುವುದನ್ನು ನಿಲ್ಲಿಸಿದ್ರಂತೆ. ಇದರಿಂದ ಕೋಪಾ ಗೊಂಡ ಮುನಿರಾಜು ಅಂಕಿತ ಎಂಬಾಕೆಹೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆಯನ್ನ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅಲ್ಲದೆ ಸಂತ್ರಸ್ಥೆ ಮಹಿಳೆಗೆ ಸುಮಾರು 6 ಲಕ್ಷ ವೇತನವನ್ನ ಬಾಕಿ ಉಳಿಸಿಲಾಗಿದೆಯಂತೆ. ಹೀಗಾಗಿ ಮಹಿಳೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಕಾಶ್ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜು ಮತ್ತು ಪುಷ್ಪ ಮುನಿರಾಜ್, ವಿಣಾ ಎಂಬುವರ ವಿರುದ್ದ ಎಫ್ ಐ ಆರ್, ದಾಖಲು ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿರಾಜು ನಾನು ಆ ಮಹಿಳೆಯನ್ನ ನೋಡಿಯೇ ಇಲ್ಲ. ನನಗೂ ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ. ಆಕೆ ಹಣಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply