ಬಿಎಸ್ ವೈ ಬ್ರೇಕಿಂಗ್ ನ್ಯೂಸ್ ಹಿಂದೆ ಅಮಿತ್ ಷಾ ಇದ್ದಾರಾ..?

ಬೆಂಗಳೂರು: ಬಿಎಸ್ ವೈ ಬ್ರೇಕಿಂಗ್ ನ್ಯೂಸ್ ಹಿಂದೆ ಅಮಿತ್ ಷಾ ಇದ್ದಾರಾ..?. ಹೌದು ಎನ್ನುತ್ತಿದೆ ಕೆಲವು ಮೂಲಗಳು. ಕರ್ನಾಟಕದಲ್ಲಿ ಟ್ರೆಂಡ್ ಸೆಟ್ ಗೆ ಹೈಕಮಾಂಡ್ ಮಾಡಿದ ಪ್ಲ್ಯಾನ್, ಮಕಾಡೆ ಮಲಗಿದೆ.

ರಾಜ್ಯ ಬಿಜೆಪಿ ನಾಯಕರಿಗೂ ಗೊತ್ತಿಲ್ಲದೇ ಬ್ರೇಕಿಂಗ್ ನ್ಯೂಸ್ ಪ್ಲ್ಯಾನ್ ಮಾಡಿದ ಅಮಿತ್ ಶಾ ಮತ್ತು ಟೀಮ್. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ಹೊಸ ತಂತ್ರ

ಹೈಕಮಾಂಡ್ ಸೂಚನೆಯಂತೆ ರಾಜನೀತಿ ಟೀಂನಿಂದ ಬ್ರೇಕಿಂಗ್ ಪ್ಲ್ಯಾನ್. ಈಗಾಗಲೇ 15 ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣ ಹ್ಯಾಂಡಲ್ ಮಾಡಿರುವ ರಾಜನೀತಿ ಟೀಂ.ಆದ್ರೆ ಉಲ್ಟಾ ಹೊಡೆಯಿತು ರಾಜನೀತಿ ಟೀಂ ಪ್ಲಾನ್!. ಈ ವಿಷಯ ಕಾಂಗ್ರೆಸ್ ಪಕ್ಷಕ್ಕೆ ಮುಂಚಿತವಾಗಿ ತಿಳಿಯಿತೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಈ ವಿಷಯ ತಿಳಿದ ಕೂಡಲೇ ವೀರಪ್ಪ ಮೊಯಿಲಿ ಯವರಿಂದ ಟ್ವೀಟ್ ಮಾಡಿಸಲಾಯಿತೆ ಎಂದು ಊಹಾ ಪೋಹ ಹರಿದಾಡುತ್ತಿದೆ.

ಯಡಿಯೂರಪ್ಪ ಮೂಲಕ ಟ್ವೀಟ್ ಮಾಡಿಸಿ ಮುಜುಗರ ಒಳಗಾಗಿರುವ ರಾಜ್ಯ ಬಿಜೆಪಿ ಹೊಸ ತಂತ್ರದ ಕಡೆ ಮನಸ್ಸು ಮಾಡಿರುವ ಹಾಗಿದೆ.

ಯಡಿಯೂರಪ್ಪ ಟ್ವೀಟ್ ಗೆ ಸಾರ್ವಜನಿಕರ ತಿರುಗೇಟು.3500ಕ್ಕೂ ಹೆಚ್ಚು ಜನರಿಂದ ಯಡಿಯೂರಪ್ಪಗೆ ರೀ ಟ್ವೀಟ್.

3000ಜನ ಯಡಿಯೂರಪ್ಪ ವಿರುದ್ಧವೇ ಅಸಮಾಧಾನ.

ಬ್ರೇಕಿಂಗ್ ನ್ಯೂಸ್ ಕೊಡೋಕೆ ಹೋಗಿ ತಾವೇ ಬ್ರೇಕಿಂಗ್ ನ್ಯೂಸ್ ಆದ ಯಡಿಯೂರಪ್ಪ.ಇದರಿಂದ ಮುಜುಗರಕ್ಕೊಳಗಾಗಿರುವ ಬಿ.ಎಸ್.ಯಡಿಯೂರಪ್ಪ,ರಾಜನೀತಿ ಟೀಮ್ ವಿರುದ್ಧ ಯಡಿಯೂರಪ್ಪ ಗರಂ ಆಗಿದ್ದಾರೆ.

ನಿಮ್ಮ ಪ್ಲಾನ್ ನಿಂದ ನಾನು ಮುಜುಗರ ಅನುಭವಿಸುವ ರೀತಿ ಆಯ್ತು.ಮುಂದೆ ಹೀಗಾಗದಂತೆ ಎಚ್ಚರವಹಿಸಿ,ಹುಚ್ ಹುಚ್ಚಾಗಿ ಪ್ಲಾನ್ ಮಾಡಬೇಡಿ.ಇದು ಕರ್ನಾಟಕ, ಇಲ್ಲಿನ ಜನರಿಗೆ ತಕ್ಕುದಾದ ರೀತಿ ಜನಮನ ಸೆಳೆಯಲು ಪ್ಲಾನ್ ಮಾಡಿ ಎಂದ ಯಡಿಯೂರಪ್ಪ ಹೇಳಿದ್ದಾರೆ

Leave a Reply