ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರದಲ್ಲಿ ಕಾಡಾನೆ ಸಾವು

ಕೊಡಗು : ಆಹಾರವನ್ನರಿಸಿ ನಾಡಿಗೆ ಬಂದಿದ್ದ ಕಾಡಾನೆಯೊಂದು ಕೆಸರಿನೊಳಗೆ ಸಿಲುಕಿ ಮೃತಪಟ್ಟಿರುವ ಕೊಡಗು ಜಿಲ್ಲೆಯಲ್ಲಿ‌ ನಡೆದಿದೆ. ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರದ ವಿಜಯ್ ಎಂಬವರ ತೋಟಕ್ಕೆ ಎಂದಿನಂತೆ ಕಾಡಾನೆಗಳ ಹಿಂಡು ಆಹಾರವನ್ನರಿಸಿ ಬಂದಿತ್ತು.

ಈ ಸಂದರ್ಭ ತೋಟದಲ್ಲಿದ್ದ ಕೆರೆಯ ನೀರು ಕುಡಿಯಲು ಧಾವಿಸಿದ ಸಂದರ್ಭ ಹೆಣ್ಣಾನೆಯೊಂದು ಕೆಸರಿನೊಳಕ್ಕೆ ಸಿಲುಕಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಮೇಲೆ ಬರಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮೂರು ಸಾಕಾನೆ ಹಾಗೂ ಜೆಸಿಬಿ ಬಳಸಿ ಕೆಸರಿನಲ್ಲಿದ್ದ ಕಾಡಾನೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಿತ್ರಾಣಗೊಂಡಿದ್ದ ಆನೆಗೆ ಮೇಲೆ ಏಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆ ನೆನ್ನೆ ತೋಟದಲ್ಲಿಯೇ ಕಾಡಾನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನೆನ್ನೆ ಒಂದು ಗೊನೆ ಬಾಳೆ ಹಣ್ಣನ್ನು ಮಾತ್ರ ಸೇವಿಸಿದ್ದ ಕಾಡಾನೆ ಇಂದು‌ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಮೃತಪಟ್ಟಿದೆ.

ಇನ್ನು ಅರಣ್ಯ ಅಧಿಕಾರಿಗಳು ಕಾಡಾನೆಯನ್ನು ಮೇಲೆತ್ತುವ ಸಂದರ್ಭ ನಿರ್ಲಕ್ಷ್ಯ ತೋರಿದ್ದರಿಂದಲೇ ಕಾಡಾನೆ ಸಾವನ್ನಪ್ಪಿದೆ ಎಂದು ಆರೋಪಿಸಿರುವ ಸ್ಥಳೀಯರು, ತೋಟಕ್ಕೆ ಆದ‌ ನಷ್ಟಕ್ಕೆ ಪರಿಹಾರ ನೀಡಿದ ಬಳಿಕವೇ ಮೃತ ಕಾಡಾನೆಯ ಅಂತ್ಯಕ್ರಿಯೆ ನಡೆಸಬೇಕೆಂದು ಆಗ್ರಹಿಸಿದ್ದಾರೆ

Leave a Reply