ಜೆಡಿಎಸ್ ನ ಮೂವರು ರೆಬಲ್ ಶಾಸಕರು ಶ್ರೀ ಕ್ಷೇತ್ರ ಆದಿ ಚುಂಚನಗಿರಿಯಲ್ಲಿಂದು ಎರಡನೇ ಅಮವಾಸ್ಯೆ ಪೂಜೆ

ಮಂಡ್ಯ :ಜೆಡಿಎಸ್ ನ ಮೂವರು ರೆಬಲ್ ಶಾಸಕರು ಶ್ರೀ ಕ್ಷೇತ್ರ ಆದಿ ಚುಂಚನಗಿರಿಯಲ್ಲಿಂದು ಎರಡನೇ ಅಮವಾಸ್ಯೆ ಪೂಜೆ ನಡೆಸ್ತಿದ್ದಾರ.

ಕಳೆದ ತಿಂಗಳ ಅಮಾಸ್ಯೆಯಲ್ಲಿ ಮೊದಲ ಅಮವಾಸ್ಯೆ ಪೂಜೆ ನಡೆಸಿದ್ದ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಾಬು ಮತ್ತು‌ ಬಾಲಕೃಷ್ಣ ಈ ಮೂವರು ರೆಬಲ್ ಶಾಸಕರು ಇಂದು ಎರಡನೇ‌‌‌‌‌‌ ಅಮವಾಸ್ಯೆ ಪೂಜೆ ಕೈಗೊಂಡ್ರು. ಇಷ್ಟಾರ್ಥ ಸಿದ್ದಿಗಾಗಿ ಜೆಡಿಎಸ್ ಈ ಮೂವರು ಶಾಸಕರು ಶ್ರೀಕ್ಷೇತ್ರ ಚುಂಚನಗಿರಿಯಲ್ಲಿ ಕಾಲಭೈರವೇಶ್ವರನಿಗೆ ಮೂರು ಅಮವಾಸ್ಯೆ ಪೂಜೆ ನಡೆಸ್ತಿದ್ದು ಜೆಡಿಎಸ್ ನ ದೊಡ್ಗೌಡ್ರಿಗೆ ತಿರುಗೇಟು ನೀಡಲು ಸಿದ್ದರಾಗಿದ್ದಾರೆ.

ಇಂದು ನಡೆದ ಎರಡನೆ ಅಮವಾಸ್ಯೆ ಪೂಜೆಯಲ್ಲಿ ದಂಪತಿ ಸಮೇತರಾಗಿ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದು, ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಕೈಂಕರ್ಯ ನೆರವೇರುತ್ತಿದೆ.

ಈಗಾಗಲೇ ಜೆಡಿಎಸ್ ನ ವರಿಷ್ಠರಾದ ದೇವೇಗೌಡ್ರ ಕುಟುಂಬದಿಂದ ಮೂವರು ತಲಾ ಮೂರಂತೆ ಅಮವಾಸ್ಯೆ ಪೂಜೆ ನಡೆಸಿದ್ದರ ಬೆನ್ನಲ್ಲೇ ಇದೀಗ ಜೆಡಿಎಸ್ ರೆಬಲ್ ಶಾಸಕರು ದೈವದ ಮೊರೆ ಹೋಗಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ನಡೆಯಿತ್ತಿರೋ ಈ ಅಮವಾಸ್ಯೆ ಪೂಜೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.

Leave a Reply