ಕಳ್ಳರ ಕೈ ಚಳಕ ಹುಂಡಿ ಕಳವು

ತುಮಕೂರು: ಮಹಲಾಕ್ಷ್ಮಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ದೇವಸ್ಥಾನದ ಹಿಂಬದಿಯ ಗೋಡೆ ಹತ್ತಿ ಒಳಕ್ಕೆ ಬಂದ ಕಳ್ಳ ಹುಂಡಿ ಒಡೆದು ಸುಮಾರು‌ 60 ಸಾವಿರಕ್ಕೂ ಹೆಚ್ಚು ನಗದು ದೋಚಿದ್ದಾನೆ.

ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಮಧ್ಯ ರಾತ್ರಿ 2.30 ಕ್ಕೆ ಬಂದು ಮೊದಲು ದೊಡ್ಡ ಹುಂಡಿ ಒಡೆಯಲು ಪ್ರಯತ್ನಿಸ್ತಾನೆ.

ಅದು ಸಾಧ್ಯವಾಗದೇ ಇದ್ದಾಗ ಚಿಕ್ಕ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದಾನೆ.ಈ ಸಂಬಂಧ ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಕ್ಯಾತ್ಸಂದ್ರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ..

Leave a Reply