4,000 ಕೋಟಿ ವಂಚನೆ ಹಗರಣ – ಮೂವರ ಬಂಧನ

ಮುಂಬೈನ ವಿವಿಧ ಬ್ಯಾಂಕ್‌ಗಳಿಗೆ ಸುಮಾರು 4,000 ಕೋಟಿ ರೂ. ಸಾಲ ಮರುಪಾವತಿ ಮಾಡದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಪಾರೇಖ್‌ ಅಲ್ಯೂಮಿನೆಕ್ಸ್‌ ಲಿಮಿಟೆಡ್‌ (ಪಾಲ್‌) ಸಂಸ್ಥೆಯ ಮೂವರು ನಿರ್ದೇಶಕರಾದ ಭವಾರ್‌ ಲಾಲ್‌ ಭಂಡಾರಿ, ಪ್ರೇಮಲ್‌ ಗೊರಾಗಾಧಿ ಹಾಗೂ ಕಮಲೇಶ್‌ ಕುನಾಂಗು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬ್ಯಾಂಕ್‌ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ ದೂರಿನ ಮೇರೆಗೆ ಹೆಚ್ಚಿನ ವಿಚಾರಣೆ ಗಾಗಿ ನಿರ್ದೇಶಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲ್‌ ಸಂಸ್ಥೆ ಸುಮಾರು 20 ಬ್ಯಾಂಕುಗಳಿಂದ ಸಾಲ ಪಡೆಯಲಾಗಿದ್ದು, ಆ್ಯಕ್ಸಿಸ್‌ ಬ್ಯಾಂಕ್‌ ಪ್ರಧಾನ ಕಚೇರಿಯಿಂದಲೇ 250 ಕೋಟಿ ರೂ. ಸಾಲ ಪಡೆಯಲಾಗಿದೆ. ಪಾಲ್‌ ಕಂಪನಿ ತನ್ನ ವ್ಯಾಪ್ತಿ ಯಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ ಅವುಗಳ ಮೇಲೆ ಸಾಲ ಪಡೆದಿರುವು ದಲ್ಲದೆ, ನಕಲಿ ಬಿಲ್‌ಗ‌ಳನ್ನೂ ನೀಡಿ ವಂಚಿಸಿದ್ದಾಗಿ ಆರೋಪಿಸಲಾಗಿದೆ.

Related image

Leave a Reply