ಶಶಿಕಲಾ ಪತಿ ನಟರಾಜನ್ ನಿಧನ

ಎಐಎಡಿಎಂಕೆ ಮುಖ್ಯಸ್ಥೆ ವಿಕೆ ಶಶಿಕಲಾ ಪತಿ ನಟರಾಜನ್ ಇಂದು ನಿಧನರಾಗಿದ್ದಾರೆ.ಅನಾರೋಗ್ಯದ ಕಾರಣ ಮಾರ್ಚ್ 16 ರಂದು ನಟರಾಜನ್ ಚೆನ್ನೈನ ಗ್ಲೆನೀಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ರಾತ್ರಿ 1.30ರ ವೇಳೆಗೆ ನಟರಾಜನ್ (74) ವಿಧಿವಶರಾಗಿದ್ದಾರೆ.

ರಾಮಚಂದ್ರ ಆಸ್ಪತ್ರೆಯಲ್ಲಿ ನಟರಾಜನ್ ಮೃತದೇಹ ಸಂರಕ್ಷಣೆ ಮಾಡಲಾಗಿದ್ದು, ಶಶಿಕಲಾ ಆಗಮನದ ಬಳಿಕ ಅಂತ್ಯಸಂಸ್ಕಾರ ನಡಯಲಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಶಶಿಕಲಾ ಈಗಾಗಲೇ ಪೆರೋಲ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Related image

Leave a Reply