ಸ್ವಯಂಚಾಲಿತ ವಾಹನಕ್ಕೊಂದು ಬಲಿ

ವಾಷಿಂಗ್ಟನ್ ನ ಸಂಪೂರ್ಣ ಸ್ವಯಂಚಾಲಿತ ಉಬರ್ SUV ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಪೋನಿಕ್ಸ್ ನಗರದ ಹೊರವಲಯದಲ್ಲಿ ನಡೆದಿದೆ. ಇದು ಸ್ವಯಂಚಾಲಿತ ಪರೀಕ್ಷಾರ್ಥ ವಾಹನ ಡಿಕ್ಕಿ ಹೊಡೆದು ಆಗಿರುವ ಮೊದಲ ಸಾವಾಗಿದ್ದು , ಈ ಘಟನೆ ಹೊಸ ತಂತ್ರಜ್ಞಾನದ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಸಾಧ್ಯತೆ ಇದೆ.

ವೋಲ್ವೋ ವಾಹನ ಸ್ವಯಂಚಾಲಿತ ವಿಧಾನದಲ್ಲಿದ್ದಾಗ 49 ವರ್ಷದ ಎಲೀನ್ ಹರ್ಜ್ಬರ್ಗ್ ಎಂಬಾಕೆಗೆ ಡಿಕ್ಕಿ ಹೊಡೆಯಿತು. ಈ ಮಹಿಳೆ ಸೈಕಲ್ ತಳ್ಳಿಕೊಂಡು ಹೋಗುತ್ತಿದ್ದರು. ತೀವ್ರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಉಬರ್ CEO ದಾರಾ ಖೋಸ್ರೊ ವಿಷಾಹಿ, ಈ ಬಗ್ಗೆ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳ ಜೊತೆ ತನಿಖೆ ನಡೆಸುತಿದೆ ಎಂದು ಹೇಳಿದ್ದಾರೆ.

ಈ ಘಟನೆ ನಡೆದ ತಕ್ಷಣ ಉಬರ್ ಪಿಯೋನೆಕ್ಸ್, ಪಿಟ್ಸ್ ಬರ್ಗ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಟೊರೊಂಟೊದ ಎಲ್ಲ ಸ್ವಯಂಚಾರಿತ ವಾಹನಗಳ ಪರೀಕ್ಷಾರ್ಥ ಪ್ರಯೋಗವನ್ನು ರದ್ದುಪಡಿಸಿದೆ. ಈ ಪರೀಕ್ಷೆ ಕೆಲವು ತಿಂಗಳುಗಳಿಂದ ನಡೆಯುತಿತ್ತು ಹಾಗು ಈ ಸೇವೆ ಆರಂಭಿಸಲು ಹಲವು ಕಂಪನಿಗಳು ಪೈಪೋಟಿಯಲಿದ್ದವು.

Leave a Reply