ಕುಮಾರಸ್ವಾಮಿಯ ಒನ್ ಮ್ಯಾನ್ ಆರ್ಮಿ ಮುಂದೆ ಮಂಕಾಗುತ್ತಿದೆಯಾ ಬಿಜೆಪಿ,ಕಾಂಗ್ರೆಸ್ ?

ಮಂಕಾದ ಬಿಜೆಪಿ, ವರ್ಕ್ ಆಗ್ತಿಲ್ಲ ಮೋದಿ ಬ್ರಾಂಡ್ ನೇಮ್

ಕರ್ನಾಟಕದಲ್ಲಿ ಬಿಜೆಪಿಯ ಮಿಷಿನ್ 150 ಯನ್ನು ಮಾಡಬೇಕೆಂದುಕೊಂಡಿದ್ದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈಗಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ, ಅಮಿತ್ ಶಾ ಅವರಿಗೆ ರಾಜ್ಯ ನಾಯಕರ ಮೇಲೆ ಯಾವುದೇ ನಂಬಿಕೆಗಳು ಉಳಿದಿಲ್ಲ ಎನ್ನುವದಂತು ಎಲ್ಲರಿಗೂ ತಿಳಿದಿರುವ ವಿಷಯವೇ.ಅವರು ನೆಚ್ಚಿಕೊಂಡಿರುವುದು ಕೇವಲ ಮೋದಿ ಎಂಬ ಹೆಸರನ್ನು,ದುರದೃಷ್ಟವಶಾತ್ ಈಗ ಅದು ಉಳಿದಿಲ್ಲ.

ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ಸೋಲು ಕೂಡ ಬಿಜೆಪಿಯವರ ಉತ್ಸಾಹ ಕಡಿಮೆಯಾಗುವಂತೆ ಮಾಡಿದೆ. ರಾಜ್ಯದಲ್ಲಿ ಟಿಕೆಟ್ ಹಂಚಿಕೆಯ ಜಗಳಗಳು ಮಿತಿ ಮೀರುತ್ತಿದ್ದು ರಾಜ್ಯಮಟ್ಟದ ನಾಯಕರಿಗೆ ಕಾರ್ಯಕರ್ತರು ಸ್ಪಂದಿಸುತ್ತಿಲ್ಲ ಇದು ಅಮಿತ್ ಶಾ ಅವರಿಗೆ ದೊಡ್ಡ ತಲೆನೋವಾಗಿ ಪರಿಗಣಿಸಿದೆ.

ಇನ್ನು ಕಾಂಗ್ರೆಸ್ನ ಸ್ಥಿತಿಯೇನು ಭಿನ್ನವಿಲ್ಲ,

ಎಲ್ಲ ಸರಿ ಇದೆ ಎಂದು ಮುನ್ನುಗ್ಗುತ್ತಿದ್ದ ಸಿದ್ದರಾಮಯ್ಯನವರ ಎಡವಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ವಾಗುವಂತೆ ಮಾಡುತ್ತಿದೆ.
ಜಾತಿ,ಧರ್ಮಗಳನ್ನು ಒಡೆದು ಆಳುತ್ತಿರುವುದು ಯುವಜನರಿಗೆ ಕಾಂಗ್ರೆಸ್ ಬಗ್ಗೆ ಅಸಹ್ಯ ಹುಟ್ಟಿಸಿದೆ.

ಅಶೋಕ್ ಖೇಣಿ ಆನಂದ್ ಸಿಂಗ್ ಹಾಗೂ ನಾಗೇಂದ್ರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ವಿರುದ್ಧ ಜನರಿಗೆ ಆಕ್ರೋಶ ಉಂಟಾಗಿದೆ ಗಣಿಗಾರಿಕೆ ಹಾಗೂ ನೈಸ್ ಅಕ್ರಮದ ವಿರುದ್ಧ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಇವುಗಳನ್ನೆಲ್ಲಾ ಮರೆತು ಅಕ್ರಮದಲ್ಲಿ ತೊಡಗಿರುವ ನಾಯಕರನ್ನು ಪಕ್ಷ ಸೇರ್ಪಡೆ ಮಾಡಿರುವುದು ಕಾಂಗ್ರೆಸ್ಗೆ ಅತಿ ದೊಡ್ಡ ಹಿನ್ನಡೆಯಾಗಿದೆ.ಈ ಎಲ್ಲಾ ಡ್ಯಾಮೇಜ್ ಅನ್ನು ತಡೆಯಲು ಜಾಹೀರಾತಿಗಾಗಿ ನೂರಾರು ಕೋಟಿ ಪೋಲು ಮಾಡುತ್ತಿರುವುದು, ಅವರ ಆತಂಕವನ್ನು ತೋರಿಸುತ್ತದೆ.

ರಾಜ್ಯದೆಲ್ಲೆಡೆ ಶೈನ್ ಆಗುತ್ತಿರುವ ಕುಮಾರಸ್ವಾಮಿ.

ಹೌದು ರಾಜ್ಯದ ಉದ್ದಗಲಕ್ಕೂ ಕೇವಲ ಮೂವತ್ತು ದಿನಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿಕೊಂಡು ಹಾಗೂ ರಾಜ್ಯದ ವಿವಿಧ ಜನಸಾಮಾನ್ಯರೊಂದಿಗೆ ಸಂವಾದಗಳನ್ನು ನಡೆಸುತ್ತಾ ಜನಸಾಮಾನ್ಯರಿಗೆ ಮತ್ತು ವಿಶೇಷವಾಗಿ ಯುವಜನತೆಗೆ ಹತ್ತಿರವಾಗುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

ಮನಮುಟ್ಟುವಂತಿದೆ ಕುಮಾರಸ್ವಾಮಿ ಅವರ ಭಾಷಣ.

ರಾಜ್ಯದ ಎಲ್ಲಾ ಪಕ್ಷದ ನಾಯಕರುಗಳು ಒಬ್ಬರನ್ನೊಬ್ಬರನ್ನು ಟೀಕಿಸಲು ನಿರಂತವಾಗಿದ್ದರೆ ಕುಮಾರಸ್ವಾಮಿಯವರ ಮಾತ್ರ ರಾಜ್ಯದ ಜ್ವಲಂತ ಸಮಸ್ಯೆಗಳ ಬೆಳಕು ಚೆಲ್ಲುತ್ತಿದ್ದಾರೆ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಹಲವು ಯೋಜನೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ಮಾಡುತ್ತಾ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಮಾಜಿ ಮುಖ್ಯಮಂತ್ರಿಗಳು.

ಮುಂದಿನ ದಿನಗಳಲ್ಲಿ ಹೇಗೆ ಮೂರೂ ರಾಜಕೀಯ ಪಕ್ಷಗಳು ತಮ್ಮ ಚದುರಂಗದ ದಾಳವನ್ನು ಉರಳಿಸುತ್ತವೆ, ಏನೆಲ್ಲ ಗಿಮಿಕ್ ಮಾಡಿ ಮತದಾರ ಪ್ರಭುವನ್ನು ತಮತ್ತ ಸೆಳೆಯುತ್ತಾರೆ ಕಾದು ನೋಡಬೇಕಿದೆ.

2 thoughts on “ಕುಮಾರಸ್ವಾಮಿಯ ಒನ್ ಮ್ಯಾನ್ ಆರ್ಮಿ ಮುಂದೆ ಮಂಕಾಗುತ್ತಿದೆಯಾ ಬಿಜೆಪಿ,ಕಾಂಗ್ರೆಸ್ ?

Leave a Reply