ಶಮಿಗೆ ರಸ್ತೆ ಮಧ್ಯೆ ನಿಲ್ಲಿಸಿ ಹೊಡೆಯಬೇಕು: ಪತ್ನಿ ಹಸೀನ್ ಜಹಾನ್

ಕೋಲ್ಕತ್ತಾ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ರಸ್ತೆ ಮಧ್ಯೆ ನಿಲ್ಲಿಸಿ ಹೊಡೆಯಬೇಕು ಎಂದು ಪತ್ನಿ ಹಸೀನ್ ಜಹಾನ್ ಹೇಳಿದ್ದಾರೆ. ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ತಾರಕಕ್ಕೇರಿದ್ದು ಬಗೆಹರಿಸುವ ಲಕ್ಷಣಗಳೇ ಕಂಡುಬರುತ್ತಿಲ್ಲ.

Related image

ಇನ್ನು ಮೊಹಮ್ಮದ್ ಶಮಿಗೂ ನನಗು ಯಾವುದೇ ಸಂಬಂಧವಿಲ್ಲ. ಅವರಿಗೆ ನಾನು ಹಣವನ್ನು ಕೊಟ್ಟೆ ಇಲ್ಲ ಎಂದು ಪಾಕ್ ಯುವತಿ ಅಲಿಶ್ಬಾ ಹೇಳಿಕೆ ನೀಡಿದ ಬೆನ್ನಲ್ಲೇ ಮೊಹಮ್ಮದ್ ಶಮಿ ಪತ್ನಿ ಹಸಿನ್ ಕೆಂಡವಾಗಿದ್ದಾರೆ. ಇದೆಲ್ಲ ನಾಟಕ. ಅಲಿಶ್ಬಾ-ಶಮಿ ನಡುವೆ ಸಂಬಂಧ ಇದೆ. ಉದ್ದೇಶ ಪೂರ್ವಕವಾಗಿಯೇ ಇವರಿಬ್ಬರು ದುಬೈನಲ್ಲಿ ಭೇಟಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದಾರೆ ಎಂದು ಆರೋಪಿಸಿದರು.

ಅಲಿಶ್ಬಾ ಒಬ್ಬ ವೇಶ್ಯೆ. ನನ್ನ ಕೌಟುಂಬಿಕ ಜೀವನವನ್ನೇ ಹಾಳು ಮಾಡಿದವಳು. ಪತಿಯ ಜತೆ ಆಕೆಯ ಸರಸ ಸಲ್ಲಾಪದ ಬಗ್ಗೆ ನನಗೆ ಮೊದಲೆ ಗೊತ್ತಿತ್ತು. ಹೀಗಾಗಿ ಅಲಿಶ್ಬಾಗೆ ಎಚ್ಚರಿಕೆಯನ್ನೂ ನೀಡಿದ್ದೆ ಎಂದರು. ನಂಬಿಕೆ ದ್ರೋಹ ಮಾಡಿರುವ ಮೊಹಮ್ಮದ್ ಶಮಿಯನ್ನು ಕ್ಷಮಿಸಬಾರದು. ರಸ್ತೆಯಲ್ಲಿ ನಿಲ್ಲಿಸಿ ಆತನಿಗೆ ಹೊಡೆಯಬೇಕು. ಆತನನ್ನು ಹಾಗೂ ಆತನ ಕುಟುಂಬವನ್ನು ಬಂಧಿಸಿ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಹಸಿನ್ ಪೊಲೀಸರು ಒತ್ತಾಯಿಸಿದ್ದಾರೆ.

ಕೃಪೆ : ಕನ್ನಡ ಪ್ರಭ

Leave a Reply