ಅಧಿಕೃತ ಜೀವನ ಚರಿತ್ರೆ ಕುರಿತು ಲೇಖಕರ ವಿರುದ್ಧ ಕಾನೂನು ಕ್ರಮ : ಸಂಜಯ್ ದತ್ತ್

ಬಾಲಿವುಡ್ ನಟ ಸಂಜಯ್ ದತ್ತ್ ತಮ್ಮ ಅನಧಿಕೃತ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಲೇಖಕ ಯಾಸಿರ್ ಉಸ್ಮನ್ ಹಾಗೂ ಪ್ರಕಾಶಕರಾದ ಜಗ್ಗರ್ ನಾಟ್ ಬುಕ್ಸ್ ವಿರುದ್ಧ ಕಾನೂನು ಕ್ರಮದ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಯಾಸಿರ್ ಉಸ್ಮನ್ ಬರೆದಿರುವ ಪುಸ್ತಕದಲ್ಲಿ ತಮ್ಮ ಕುಟುಂಬ ಹಾಗೂ ನನ್ನಗೆ ಅಪಮಾನ ಮಾಡಲಾಗಿದೆ ಅದರಲ್ಲಿ ಯಾವುದೇ ಉತ್ತಮ ಅಂಶಗಳಿಲ್ಲ. ತಮ್ಮ ಅಧಿಕೃತ ಜೀವನ ಚರಿತ್ರೆ ಶೀಘ್ರದಲ್ಲಿಯೇ ಹೊರಬರಲಿದೆ. ಅದರಲ್ಲಿ ಎಲ್ಲಾ ಅಂಶಗಳು ಇರಲಿವೆ ಎಂದು ಅವರು ಟ್ವಿಟರ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.

ಈ ಮಧ್ಯೆ ಪುಸ್ತಕದಿಂದ ಸಂಜಯ್ ದತ್ತ್ ಬೇಸರಗೊಂಡಿದ್ದರೆ ಕ್ಷಮೆ ಯಾಚಿಸುವುದಾಗಿ ಜಗ್ಗರ್ ನಾಟ್ ಪ್ರಕಾಶಕ ಸಂಸ್ಥೆ ತಿಳಿಸಿದೆ.

ತಮ್ಮ ಜೀವನ ಚರಿತ್ರೆ ಬರೆಯಲು ಅಥವಾ ಮುದ್ರಿಸಲು ಯಾಸೀರ್ ಉಸ್ಮನ್ ಅವರೀಗಾಗಲೀ ಅಥವಾ ಜಗ್ಗರ್ ನಾಟ್ ಪ್ರಕಾಶಕರಿಗಾಗಲೇ ನಾನೂ ಯಾವುದೇ ಅನುಮತಿ ನೀಡಿರುವುದಿಲ್ಲ. ನಮ್ಮ ವಕೀಲರು ಜಗ್ಗರ್ ನಾಟ್ ಪ್ರಕಾಶಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು ಸಂಜಯ್ ದತ್ತ್ ಹೇಳಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಸಂಜಯ್ ದತ್ತ್ ತಿಳಿಸಿದ್ದಾರೆ.

Leave a Reply