ಕೋರ್ಟ್ ಹಾಜರಾಗಲಿರುವ ಡಿ ಕೆ ಶಿ

ಬೆಂಗಳೂರು : ಆಗಸ್ಟ್ 2 2017 ರಲ್ಲಿ ನೆಡೆದ ಐಟಿ ದಾಳಿ ವೇಳೆ ಪ್ರಮುಖ ದಾಖಲೆಗಳ ಹರಿದ ಕೇಸ್ಗೆ ಸಂಬಂದಿತವಾಗಿ ಇಂದು ನ್ಯಾಯಾಲಯ ಮುಂದೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಹಾಜರಾಗುವ ಸಾಧ್ಯತೆ ಇದೆ.

ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಗದ ಹರಿದಿದ್ದ ಡಿಕೆಶಿ. ಪ್ರಮುಖ ದಾಖಲೆಗಳ ಸಾಕ್ಷ್ಯ ನಾಶ ಮಾಡಿದ್ದಾರೆಂದು ದೂರು ದಾಖಲಿಸಿದ್ದ ಐಟಿ.

ಈ ದೂರು ಅದರಸಿ ಮಾರ್ಚ್ ೨೨ ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದ ನ್ಯಾಯಾಲಯ.ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಹಾಜರಾಗಲಿರುವ ಡಿಕೆಶಿ.

ಐಟಿ ದಾಳಿ ವೇಳೆ ತನ್ನ ಬಳಿಯಿದ್ದ ಪ್ರಮುಖ ದಾಖಲೆಯನ್ನ ಹರಿದು ಹಾಕಿದ್ದಾರೆ ಡಿಕೆಶಿ ಎಂದು ಆರೋಪ ಮಾಡಿರುವ ಐ ಟಿ.

ಅಗಸ್ಟ್ ಎರಡರಂದು ನಡೆದಿದ್ದ ಐಟಿ ದಾಳಿ ವೇಳೆ ಕಾಗದ ಹರಿದಿದ್ದ ಡಿಕೆಶಿ.

ಆದಾಯ ತೆರಿಗೆ ಕಾಯ್ದೆ ಹಾಗೂ IPC 401ರಡಿ ದೂರು ದಾಖಲಿಸಿದ್ದ ಐಟಿ.

ವಿಚಾರಣೆ ನಡೆಸಿದ್ದ ಅರ್ಥಿಕ ಅಪರಾಧಗಳ ನ್ಯಾಯಾಲಯ ಮಾರ್ಚ್ ೨೨ ರಂದು ಖುದ್ದು ಹಾಜರಾಗುವಂತೆ ಡಿಕೆಶಿ ಗೆ ನೋಟಿಸ್ ನೀಡಿತ್ತು.

Leave a Reply