ಕಾಳಿಂಗ ಸರ್ಪ ರೆಸ್ಕ್ಯೂ .

ಕಾರವಾರ :ಹಾವು ಅಂದ್ರೆ ಎಂತವರೂ ಭಯ ಪಡುತ್ತಾರೆ ಅಂತದ್ರಲ್ಲಿ ಕಾರ್ಕೋಟಕ ವಿಷ ವಿರುವ ಕಾಳಿಂಗ ಸರ್ಪ ಅಂದ್ರೆ ಯಾರಿಗೆ ತಾನೇ ಭಯ ವಿರೊಲ್ಲ ಹೇಳಿ ‌.

ಹೌದು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ 12 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗೋಬ್ರಾಳ ದಲ್ಲಿ ನಡೆದಿದೆ.

ಇಲ್ಲಿನ ದಾವುಲ್ ಶೇಖ್ ಎಂಬುವವರ ರೆಸಾರ್ಟ್ ಗೆ ಈ ಅಪರೂಪದ ಅಥಿತಿ ಆಗಮಿಸಿದ್ದು ತನ್ನ ಬೃಹದಾಕಾರದ ಮೈಮಾಟದಿಂದ ಸ್ಥಳೀಯರನ್ನು ಭಯಭೀತ ಗೊಳಿಸಿತ್ತು‌ ತಕ್ಷಣದಲ್ಲಿ ಉರುಗ ತಜ್ಞ ರಝಾಕ್ ಶಾಹಾ ಆಗಮಿಸಿ 12 ಅಡುಗೂ ಹೆಚ್ಚು ಉದ್ದದ 10 ವರ್ಷ ಪ್ರಾಯದ ಹೆಣ್ಣು ಕಾಳಿಂಗವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Leave a Reply