ಈ ಸೀರೆ ಬೆಲೆ ಎಷ್ಟು ಗೊತ್ತೇ ??

ಚೆನ್ನೈ: ಈ ಸೀರೆಯ ಬೆಲೆ 40 ಕೋಟಿ ರೂಪಾಯಿಗಳು. ಇದರ ಹೆಸರು “ವಿವಾಹ ಪೀತಾಂಬರ!”

ಈ ಸೀರೆಯಲ್ಲಿ ಖ್ಯಾತ ಚಿತ್ರಕಾರ ರವಿವರ್ಮನ ಹನ್ನೊಂದು ತೈಲ ಚಿತ್ರಗಳನ್ನ ಮರು ಮೂಡಿಸಿ, ಅದನ್ನ ಅಪ್ಪಟ ಚಿನ್ನದ ಜರಿಯಿಂದ ಕಸೂತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ವಜ್ರ, ಮುತ್ತು, ಹವಳ, ವೈಢೂರ್ಯ ಇತ್ಯಾದಿ ನವರತ್ನಗಳನ್ನ ಇಡೀ ಪೀತಾಂಬರದಲ್ಲಿ ಅಳವಡಿಸಲಾಗಿದೆ.

ಇದನ್ನ 36 ಜನ ಕೌಶಲ್ಯವುಳ್ಳವರಿಂದ ನೇಯಿಸಲಾಗಿದೆ. ಈ ಸೀರೆ ತಯಾರಾಗಿರುವುದು ಕಂಚೀಪುರಂನ ಚೆನ್ನೈ ಸಿಲ್ಕ್ ಮಿಲ್ಸ್’ನಲ್ಲಿ.

ಇದು 8 ಕೇಜಿ ತೂಕವಿದ್ದು, ಸೀರೆ ತಯಾರಾಗಲು ಒಟ್ಟು 12 ತಿಂಗಳು ಹಿಡಿದಿದೆ. ವಿಶ್ವದ ಅತಿ ದುಬಾರಿ ಸೀರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪಟ್ಟು ಪೀತಾಂಬರ ಗಿನ್ನೆಸ್ ಬುಕ್ ದಾಖಲೆ ಸೇರಿದೆ.

Leave a Reply