ಕಾಂಗ್ರೆಸ್ಸನ್ನು ಕರ್ನಾಟಕದಲ್ಲೂ ಸೋಲಿಸಲು ಬಂದ ಐರನ್ ಲೆಗ್ ರಾಹುಲ್ ಗಾಂಧಿ.

ಹೌದು.. ಕನಿಷ್ಠ ನಾಯಕತ್ವ ಯೋಗ್ಯತೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗಿರುವ ರಾಹುಲ್ ಗಾಂಧಿ ಪ್ರಚಾರ ನಡೆಸಿದ ಕಡೆಗಳಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಹೀನಾಯವಾಗಿ ಸೋತು ಮಣ್ಣು ಮುಕ್ಕುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಹಾಸ್ಯದ ವಸ್ತುವಾದ ರಾಹುಲ್

ರಾಹುಲ್ ಗಾಂಧಿ ಅಂದ್ರೆ ಸಣ್ಣ ಮಕ್ಕಳು ಕೂಡ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಅಂಥದ್ರಲ್ಲಿ ತಾನು ಬಂದು ಕರ್ನಾಟಕದಲ್ಲಿ ಇಟಲಿ ಶೈಲಿಯ ಹಿಂದಿ ಮಾತಾಡಿದ್ರೆ ಕನ್ನಡಿಗರು ಮರುಳಾಗಿ ಮತ್ತೆ ಕಾಂಗ್ರೆಸ್ ಗೆಲ್ಲಿಸುತ್ತಾರೆ ಅನ್ನೋ ಭ್ರಮೆಯಲ್ಲಿ, ಹುಮ್ಮಸ್ಸಿನಲ್ಲಿ ಇರುವುದನ್ನು ನೋಡಿ ರಾಜ್ಯಾದ್ಯಂತ ಜನ ಅಪಹಾಸ್ಯ ಮಾಡ್ತಾ ಇದ್ದಾರೆ.

ಜೆಡಿಎಸ್ ಅನ್ನು ಕೆಣಕಿದ ರಾಹುಲ್

ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬಲವಾಗುತ್ತಿರುವುದನ್ನು ನೋಡಿ ಬೆದರಿರುವ ರಾಹುಲ್ ಗಾಂಧಿ ಹತಾಶನಾಗಿ ಬಿಜೆಪಿ ಬಿಟ್ಟು ಜೆಡಿಎಸ್ ವಿರುದ್ಧ ಟೀಕೆ ಮಾಡೋಕೆ ಶುರು ಮಾಡಿದ್ದಾರೆ. ಆದ್ರೆ ಈಗಾಗಲೇ ಹಾಸ್ಯದ ವಸ್ತುವಾಗಿರುವ ಆತ ಮಾಡುವ ಟೀಕೆಗೆ ಯಾರೂ ಕ್ಯಾರೇ ಅನ್ನೂದಿಲ್ಲ ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದೇ ಕಾಂಗ್ರೆಸ್ ಪಕ್ಷದ ಪುಢಾರಿಗಳು ಈತನನ್ನು ಚೂ ಬಿಟ್ಟಿದ್ದಾರೆ.

ಈಗ ದೇವಸ್ಥಾನ ಸುತ್ತಲೂ ಶುರು ಮಾಡಿದ ಕಾಂಗ್ರೆಸ್ ನಾಯಕರು.

ಇಷ್ಟು ದಿನ ತಾನು ಜಾತ್ಯತೀತ ಅಂತಾ ಹೇಳಿಕೊಳ್ಳುತ್ತಿದ್ದ ಈ ಇಟಲಿ ಕೂಸು, ಈಗ ಮತಕ್ಕಾಗಿ ಕರ್ನಾಟಕದಲ್ಲಿ ಟೆಂಪಲ್ ರನ್ ಮಾಡ್ತಾ ಇದ್ದಾನೆ. ಭಾರತದ ಸಾಮಾಜಿಕ, ಧಾರ್ಮಿಕ ವಾಸ್ತವ ಅರಿಯದ ಈತ ಹೋದಲ್ಲೆಲ್ಲಾ ಯಡವಟ್ಟು ಮಾಡಿಕೊಂಡು ಗೇಲಿಗೆ ಒಳಗಾಗುತ್ತಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಮಟ್ಟಿಗೆ ಹಿನ್ನಡೆ ಮಾಡ್ತಾ ಇರುವುದು ಸತ್ಯವೇ.

ಇವನರ್ವ ಇವನರ್ವ,ವಿಶೇಶರ ವಯ್ಯ ಅಂದ ರಾಹುಲ್

ಕರ್ನಾಟಕದ ಮಹನೀಯರ ಹೆಸರು ಹೇಳುವಾಗ ತನ್ನ ಇಟಲಿ ಮಿಶ್ರಿತ ಭಾಷೆಯಲ್ಲಿ ಹೇಳಿ ಅವರ ಹೆಸರನ್ನು ಅಧ್ವಾನ ಮಾಡ್ತಾ ಇರುವುದು, ಧಾರ್ಮಿಕ ಕೇಂದ್ರಕ್ಕೆ ಹೋದಾಗ ಅಲ್ಲಿ ಇರಿಸು ಮುರಿಸು ಆಗುವ ಹಾಗೆ ನಡೆದುಕೊಳ್ಳುತ್ತಿರುವುದು ಇದೆಲ್ಲಾ ಈಗ ನ್ಯೂಸ್ ಚಾನಲ್ ಗಳಿಗೆ ಭರಪೂರ ಮನೋರಂಜನೆಯ ಸರಕಾಗಿದೆ ಮತ್ತು ಇದೆಲ್ಲಾ ನೋಡಿ ಕೆಲವು ಮೂಲ ಕಾಂಗ್ರೆಸ್ ಪಕ್ಷದವರೂ ಇಂಥ ಅಪ್ರಭುದ್ಧನಿಗೆ ವೋಟು ಹಾಕಬೇಕಾ ಅಂತಾ ಮಾತಾಡಿಕೊಳ್ಳುತ್ತಿದ್ದಾರೆ.

ರಾಹುಲ್’ನಿಂದ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು.

ಈ ಯುವರಾಜ ಮೊನ್ನೆ ಮಂಡ್ಯಕ್ಕೆ ಬಂದು ಅಲ್ಲಿ ತನ್ನ ಇಟಲಿ ಮಿಶ್ರಿತ ಹಿಂದಿ ಭಾಷೆಯಲ್ಲಿ ಏನೇನೋ ಮಾತಾಡಿ ಹೋದ ಮೇಲೆ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ನಾಯಕರು ಕೂಡ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರಂತೆ. ರಾಹುಲ್ ಗಾಂಧಿಯಂತ ಅಪ್ರಬುದ್ಧನ ಜೊತೆ ಸಭೆಯಲ್ಲಿ ಇದ್ರೆ ತಮಗೆ ಸಿಗುವ ಗೌರವವೂ ದಕ್ಕುವುದಿಲ್ಲ ಎಂದು ಅರಿತ ಉಸ್ತುವಾರಿ ಸಚಿವ ಎಂ ಕೃಷ್ಣಪ್ಪ, ಸ್ಥಳೀಯ ಪ್ರಭಾವಿ ಕಾಂಗ್ರೆಸ್ ನಾಯಕರಾದ ಅಂಬರೀಷ್ ಹಾಗೂ ರಮ್ಯಾ ಬೇಕೆಂದೇ ರಾಹುಲ್ ಸಭೆಗೆ ಗೈರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಹುಲ್’ನಿಂದ ಜೆಡಿಎಸ್’ಗೆ ಲಾಭ ?

ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳು ಜೆಡಿಎಸ್ ಪಕ್ಷಕ್ಕೆ ಹಳೇ ಮೈಸೂರು ಭಾಗದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಿದೆ ಎಂದೇ ಹೇಳಲಾಗುತ್ತಿದೆ. ರಾಹುಲ ಗಾಂಧಿ ಭಾಷಣ ಮಾಡಿದ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತದಾರರು ಕೂಡ ಜೆಡಿಎಸ್ ಪಕ್ಷದ ಕಡೆ ವಾಲುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

Leave a Reply