ಚರ್ಚ್‌ಸ್ಟ್ರೀಟ್‌ ಅವಾಂತರಗಳು

ಬೆಂಗಳೂರು : ಹೊಸದಾಗಿ ನಿರ್ಮಾಣವಾಗಿರುವ ಚರ್ಚ್‌ಸ್ಟ್ರೀಟ್‌ ಕುಡುಕರ ಅಡ್ಡವಾಗಿ ಬದಲಾಗಿದೆ.

ಮಧ್ಯರಾತ್ರಿ 2.30ರವರೆಗೂ ಇಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಕುಡುಕರು ರಸ್ತೆಯಲ್ಲಿಯೇ ಮತ್ತೇರಿಸಿಕೊಳ್ತಿದ್ದಾರೆ. ಆಶ್ಚರ್ಯ ಅಂದ್ರೆ, ಕುಡುಕರು ಪೊಲೀಸರ ಎದುರೇ ಮದ್ಯಪಾನ ಮಾಡುತ್ತಿದ್ದಾರೆ. ನೋ ಪಾರ್ಕಿಂಗ್‌ನಲ್ಲಿ ಕಾರಿನ ಮೇಲೆ ಮದ್ಯ ತುಂಬಿದ ಗ್ಲಾಸ್ ಇಟ್ಟುಕೊಂಡು ರಾಜರೋಷವಾಗಿ ಮದ್ಯ ಸೇವಿಸುತ್ತಿದ್ದಾರೆ.

ಚರ್ಚ್‌ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಕುಡುಕರ ಹಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಕಣ್ಣಾರೆ ಕಂಡರು ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.

ಚರ್ಚ್‌ಸ್ಟ್ರೀಟ್‌ನಲ್ಲಿ ವಾಹನ ನಿಲ್ಲಿಸಬಾರದೆಂಬ ನಿಯಮ ವಿದ್ದರೂ ಆಟೋ ಹಾಗೂ ಖಾಸಗಿ ವಾಹನಗಳನ್ನ ಪಾರ್ಕಿಂಗ್ ಮಾಡಲಾಗ್ತಿದೆ. ಇದನ್ನು ನೋಡಿಯೂ ಕೂಡ ಪೊಲೀಸರು ಗಪ್‌ಚುಪ್‌ ಆಗಿರೋದು ತೀವ್ರ ಟೀಕೆಗೆ ಗುರಿಯಾಗಿದೆ. ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯಪಾನ ಸೇವಿಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಸಾರ್ವಜನಿಕರು, ಪೊಲೀಸರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ..

Leave a Reply