ಶಾಲಾ ಆವರಣದಲ್ಲಿ ನಾಗರಹಾವು ನಾಗರಹಾವು ಕಂಡು ಭಯಬಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು

ಚಿಕಮಗಳೂರು:ಶಾಲಾ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಶಾಲೆಯ ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗುಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಶಾಲಾ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡು ವಿದ್ಯಾರ್ಥಿಗಳಲ್ಲಿ ಆಂತಕ ಸೃಷ್ಟಿಯಾಗಿತ್ತು.

ಇನ್ನು ನಾಗರಹಾವು ಇಂದು ಬೆಳ್ಳಿಗೆ ಕೂಡ ಕಾಣಿಸಿಕೊಂಡ ಪರಿಣಾಮ ಉರಗ ತಜ್ಞ
ಬಣಕಲ್ ಅರೀಫ್ ಮಾಹಿತಿ ತಿಳಿಸಲಾಯ್ತು. ಆರೀಪ್ ಸ್ಥಳಕ್ಕೆ ಬಂದು ನಾಗರಹಾವು ಹಿಡಿದು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ನಾಗರಹಾವು ಸುಮಾರು ೫ ಅಡಿ ‌ಉದ್ದದ್ದಾಗಿದ್ದು ಶಾಲಾ ಮಕ್ಕಳಲ್ಲಿ
ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿದ್ದು ಹಾವು ಹಿಡಿದಮೇಲೆ ಮಕ್ಕಳು ನಿಟ್ಟಿಸಿರು ಬಿಟ್ರು.

Leave a Reply