ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಮಂಡ್ಯ : ಮದ್ದೂರು ತಾಲೂಕಿನ ಬೆಸಗರಳ್ಳಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನೆಡದಿದೆ.

ಚಾಮನಹಳ್ಳಿ ಗ್ರಾಮದ ಸಿ.ಟಿ. ದರ್ಶಿನಿ ತಂದೆಯ ಸಾವಿನ ದುಃಖದ ನಡುವೆ ಪರೀಕ್ಷೇ ಬರೆದ ವಿದ್ಯಾರ್ಥಿ.ಮದ್ದೂರಿನ ದೇಶವಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಾಗಿರೋ ದರ್ಶಿನಿ.

ತಂದೆ ತ್ಯಾಗರಾಜು ಬೆಳಿಗ್ಗೆ ೭ ಗಂಟೆ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ರು.ತಂದೆ ಸಾವಿನ ದುಃಖದ ನಡುವೆಯೂ ವಿಜ್ಞಾನ ವಿಷಯದ ಪರೀಕ್ಷೇ ಬರೆದ ವಿದ್ಯಾರ್ಥಿನಿ.

ವಿದ್ಯಾರ್ಥಿನಿಯ ಸಂಕಷ್ಟ ನೋಡಿ ಮರುಗಿದ ಪರೀಕ್ಷಾ ಕೇಂದ್ರ ಅಧಿಕಾರಿ ಮತ್ತು ಸಿಬ್ಬಂದಿಗಳು.

ದುಃಖದ ನಡುವೆ ಪರೀಕ್ಷೇ ಬರೆದ ವಿದ್ಯಾರ್ಥಿನಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಶಾಲೆಯ ಶಿಕ್ಷಕ ವೃಂದ ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳು.

Leave a Reply