ಯಕ್ಷಗಾನದಲ್ಲಿ ರಾಹುಲ್ ಗಾಂಧಿ ವಚನಗಳು.

ಉಡುಪಿ: ರಾಜ್ಯ ಪ್ರವಾಸದಲ್ಲಿದ್ದ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ಕಾಂಗ್ರೇಸ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ವಿಚಾರಗಳಿಗಿಂತ ಅತ್ಯಂತ ಹೆಚ್ಚು ಪ್ರಚಾರವಾಗಿದ್ದು, ಅವರು ಉಚ್ಛರಿಸಿದ ಎರಡು ಸಾಲು ಬಸವಣ್ಣನ ವಚನಗಳು.

ಇವನಾರವ, ಇವನಾರವ, ಇವನಮ್ಮವ , ಇವನಮ್ಮವ ಎನ್ನುವ ವಚನವನ್ನು ಇವನರ್ವ, ಇವನರ್ವ, ಇವನ್ಮ್ವ , ಇವನ್ಮ್ವ ಎಂದು ರಾಹುಲ್ ಉಚ್ಚರಿಸುವ ಮೂಲಕ ಮುಜುಗರಕ್ಕೀಡಾಗಿದ್ದರು.

ಇದೀಗ ಈ ಮಾತು ಯಕ್ಷಗಾನದ ಹಾಸ್ಯದಲ್ಲೂ ಕೇಳಿ ಬರಲಾರಂಭಿಸಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಹಾಸ್ಯ ಕಲಾವಿದರು ರಾಹುಲ್ ಗಾಂಧಿಯ ಈ ಮಾತನ್ನೇ ಯಕ್ಷಗಾನದಲ್ಲೂ ಅನುಕರಣೆ ಮಾಡುವ ಮೂಲಕ ಭಾರೀ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಯಕ್ಷಗಾನದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ರಾಹುಲ್ ಗಾಂಧಿಯ ವಚನದ ಮಾತು ಇದೀಗ ಫುಲ್ ಹಿಟ್ ಆಗುತ್ತಿದೆ. ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Leave a Reply